ಶನಿವಾರ, ನವೆಂಬರ್ 28, 2020
24 °C
ವಿಶ್ವ ಆರೋಗ್ಯ ಸಂಸ್ಥೆಗೆ ಮತ್ತೆ ಅಮೆರಿಕ ಸೇರ್ಪಡೆ

ಚೀನಾ ನಿಯಮಗಳಿಗನುಸಾರ ನಡೆದುಕೊಳ್ಳಬೇಕು: ಜೋ ಬೈಡನ್‌

ಪಿಟಿಐ Updated:

ಅಕ್ಷರ ಗಾತ್ರ : | |

ಜೋ ಬೈಡನ್‌

ವಾಷಿಂಗ್ಟನ್‌: ‘ಚೀನಾ ನಿಯಮಗಳಿಗನುಸಾರವಾಗಿ ನಡೆದುಕೊಳ್ಳಬೇಕಾಗಿದೆ’ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌  ಹೇಳಿದ್ದಾರೆ. ಅಲ್ಲದೆ, ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯನ್ನು (ಡಬ್ಲ್ಯೂಎಚ್‌ಓ) ಮತ್ತೆ ಸೇರಿಕೊಳ್ಳಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಘೋಷಿಸಿದ್ದಾರೆ.

‘ಚೀನಾದ ವರ್ತನೆಗಾಗಿ ಅದನ್ನು ಶಿಕ್ಷಿಸಲು ಬಯಸುತ್ತೇನೆ’ ಎಂದು ಜೋ ಬೈಡನ್‌ ಅವರು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನಡೆದ ಅಧ್ಯಕ್ಷೀಯ ಸಂವಾದದಲ್ಲಿ ಹೇಳಿದ್ದರು. ಹೀಗಾಗಿ, ಚೀನಾದ ಮೇಲೆ ಆರ್ಥಿಕ ನಿರ್ಬಂಧ ಹೇರುವ ಚಿಂತನೆಯಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೈಡನ್‌, ‘ಚೀನಾ ನಿಯಮಗಳಿಗನುಸಾರವಾಗಿ ನಡೆದುಕೊಳ್ಳುತ್ತಿದೆಯೇ ಎಂಬುದನ್ನು ಮೊದಲು ಖಚಿತ ಪಡಿಸಿಕೊಳ್ಳುತ್ತೇನೆ’ ಎಂದಿದ್ದಾರೆ.

‘ಇದು ಕೇವಲ ಚೀನಾವನ್ನು ಶಿಕ್ಷಿಸುವ ವಿಷಯವಲ್ಲ. ಚೀನಾ ನಿಯಮಗಳಿಗನುಸಾರವಾಗಿ ನಡೆದುಕೊಳ್ಳಬೇಕು. ಇದನ್ನು ಚೀನಾಗೆ ತಿಳಿಯಪಡಿಸಬೇಕಾಗಿದೆ . ಡಬ್ಲ್ಯೂಎಚ್‌ಓನಲ್ಲಿ ಪುನಃ ಸೇರಿಕೊಳ್ಳಲು ಇದು ಕೂಡ ಒಂದು ಪ್ರಮುಖ ಕಾರಣ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

‘ನಾವು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಮತ್ತೆ ಸೇರಲಿದ್ದೇವೆ. ಇದಕ್ಕಾಗಿ ಕೆಲವೊಂದು ಸುಧಾರಣೆ, ಅಂಗೀಕಾರಗಳು ಆಗಬೇಕಾಗಿದೆ. ನಾವು ಪ್ಯಾರಿಸ್‌ ಹವಾಮಾನ ಒಪ್ಪಂದಲ್ಲೂ ಭಾಗಿಯಾಗಲಿದ್ದೇವೆ. ಎಲ್ಲ ರಾಷ್ಟ್ರಗಳು ಒಗ್ಗೂಡಬೇಕು. ಚೀನಾಗೆ ಅದರ ವರ್ತನೆ ಬಗ್ಗೆ ತಿಳಿ ಹೇಳಬೇಕು’ ಎಂದು ಅವರು ತಿಳಿಸಿದರು.

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು