ಇಸ್ಲಾಮಾಬಾದ್: 'ಪಾಕಿಸ್ತಾನದಲ್ಲಿ ಶೀಘ್ರವೇ ಕೊರೊನಾ ನಾಲ್ಕನೇ ಅಲೆ ಕಾಣಿಸಿಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ‘ ಎಂದು ಯೋಜನಾ ಖಾತೆ ಸಚಿವ ಅಸಾದ್ ಉಮರ್ ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್–19ನಿಯಂತ್ರಣಕ್ಕಾಗಿ ರಚಿಸಿರುವ ನ್ಯಾಷನಲ್ ಕಮಾಂಡ್ ಅಂಡ್ ಆಪರೇಷನ್ ಸೆಂಟರ್ (ಎನ್‌ಸಿಒಸಿ) ಮುಖ್ಯಸ್ಥರೂ ಆಗಿರುವ ಉಮರ್ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ.
‘ಸಾರ್ವಜನಿಕರು ಕೋವಿಡ್–19 ಪ್ರಮಾಣಿತ ಕಾರ್ಯಾಚರಣೆಯ ವಿಧಾನಗಳನ್ನು(ಎಸ್‌ಒಪಿ) ಅನುಸರಿಸುತ್ತಿಲ್ಲ. ಜತೆಗೆ, ಡೆಲ್ಟಾ ರೂಪಾಂತರ ಸೋಂಕು ವ್ಯಾಪಕವಾಗುತ್ತಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ನಾಲ್ಕನೇ ಅಲೆಯ ಆರಂಭದ ಸ್ಪಷ್ಟ ಲಕ್ಷಣಗಳು ಕಾಣಿಸುತ್ತಿವೆ’ ಎಂದು ಎಚ್ಚರಿಕೆ ನೀಡಿದ್ದಾರೆ.
‘ಜನರು ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ವರದಿಗಳು ಹೇಳುತ್ತಿವೆ. ಹೀಗೆ ನಿಯಮಗ ಳನ್ನು ಉಲ್ಲಂಘಿಸುತ್ತಿದ್ದರೆ, ಸರ್ಕಾರ ಕಲ್ಯಾಣ ಮಂಟಪ, ರೆಸ್ಟೋರೆಂಟ್ ಮತ್ತು ಜಿಮ್‌ಗಳನ್ನು ಬಲವಂತವಾಗಿ ಬಂದ್ ಮಾಡಿಸಲಿದೆ‘ ಎಂದು ಅವರು ಎಚ್ಚರಿಸಿದ್ದಾರೆ.
‘ಕೃತಕ ಬುದ್ಧಿಮತ್ತೆ ಆಧಾರಿತ ರೋಗ ಮಾದರಿ ವಿಶ್ಲೇಷಣೆಗಳು ಪಾಕಿಸ್ತಾನದಲ್ಲಿ ಕೋವಿಡ್ ನಾಲ್ಕನೇ ಅಲೆ ಆರಂಭವಾಗುವ ಸೂಚನೆಯನ್ನು ನೀಡುತ್ತಿವೆ ಎಂದು ನಾನು ಎರಡು ವಾರಗಳ ಹಿಂದೆ ಟ್ವೀಟ್ ಮಾಡಿದ್ದೆ‘ ಎಂದು ಅವರು ಟ್ವೀಟ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.