ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: ನಾಲ್ಕು ಕೋಟಿಗಿಂತ ಹೆಚ್ಚು ಸೋಂಕಿತರು ಚೇತರಿಕೆ

Last Updated 22 ನವೆಂಬರ್ 2020, 16:43 IST
ಅಕ್ಷರ ಗಾತ್ರ

ವಾಷಿಂಗ್ಟನ್: ಜಗತ್ತಿನಾದ್ಯಂತ ಕೋವಿಡ್‌–19 ಪ್ರಕರಣಗಳ ಸಂಖ್ಯೆ 5.87 ಕೋಟಿಗೆ ಏರಿಕೆಯಾಗಿದ್ದು, 4.06 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವರ್ಡೋಮೀಟರ್‌ ವೆಬ್‌ಸೈಟ್‌ ವರದಿ ಮಾಡಿದೆ.

ಈವರೆಗೆ ಸೋಂಕಿನಿಂದಾಗಿ ಸಾವಿಗೀಡಾದವರ ಸಂಖ್ಯೆ 13,89,576ಕ್ಕೆ ಏರಿಕೆಯಾಗಿದೆ. ಸದ್ಯ 1,66,70,807 ಸಕ್ರಿಯ ಪ್ರಕರಣಗಳು ಇವೆ.

ಅತಿಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿರುವ ಅಮೆರಿಕದಲ್ಲಿ ಇಂದು ಒಂದೇ ದಿನ 12,832 ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಈ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1.24 ಕೋಟಿಗೆ ಏರಿಕೆಯಾಗಿದೆ. ಇಲ್ಲಿ ಒಟ್ಟು 2,61,885 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 74.05 ಲಕ್ಷ ಜನರು ಗುಣಮುಖರಾಗಿದ್ದಾರೆ.

ಇದನ್ನೂ ಓದಿ |ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಭಾರತದಲ್ಲಿ 91.29 ಲಕ್ಷ, ಬ್ರೆಜಿಲ್‌ನಲ್ಲಿ 60.52 ಲಕ್ಷ, ಫ್ರಾನ್ಸ್‌ನಲ್ಲಿ 21.27 ಲಕ್ಷ, ರಷ್ಯಾದಲ್ಲಿ 20.89 ಲಕ್ಷ, ಸ್ಪೇನ್‌ನಲ್ಲಿ 15.89 ಲಕ್ಷ ಪ್ರಕರಣಗಳು ವರದಿಯಾಗಿವೆ.

ಕೋವಿಡ್‌ನ ಗಂಭೀರ ಸಮಸ್ಯೆಗಳಿಗೆ ಔಷಧ
ವಾಷಿಂಗ್ಟನ್‌:ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ವಿಜ್ಞಾನಿ ಡಾ.ತಿರುಮಲದೇವಿ ಕನ್ನೆಗಂಟಿ ಅವರು ಕೋವಿಡ್‌ ರೋಗಿಗಳಲ್ಲಿ ಕಾಣಿಸಿಕೊಳ್ಳಬಹುದಾದ ಉರಿಯೂತ, ಶ್ವಾಸಕೋಶದ ಹಾನಿ ಹಾಗೂ ಬಹು ಅಂಗಾಂಗ ವೈಫಲ್ಯದಂತಹ ಗಂಭೀರ ಸಮಸ್ಯೆಗಳಿಗೆ ಔಷಧ ಕಂಡುಹಿಡಿದಿದ್ದಾರೆ.

ಡಾ.ತಿರುಮಲದೇವಿ ಕನ್ನೆಗಂಟಿ ಪ್ರಯೋಗಾಲಯದಲ್ಲಿ ಅವರ ತಂಡವು ಹಲವು ಪ್ರಯೋಗಗಳನ್ನು ನಡೆಸಿ ಈ ಕಾಯಿಲೆಗಳಿಗೆ ಸೂಕ್ತ ಔಷಧ ಕಂಡುಹಿಡಿದಿದ್ದಾರೆ.‘ಸೆಲ್‌’ ಪತ್ರಿಕೆಯ ಆನ್‌ಲೈನ್‌ ಆವೃತ್ತಿಯಲ್ಲಿ ತಿರುಮಲದೇವಿ ಅವರ ಸಂಶೋಧನಾ ವರದಿಯು ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT