ಶುಕ್ರವಾರ, ಡಿಸೆಂಬರ್ 4, 2020
23 °C

ಕೋವಿಡ್‌: ಭಾರತೀಯ ಅಮೆರಿಕನ್ನರಿಂದ ಸರಳ ದೀಪಾವಳಿ ಆಚರಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಭಾರತೀಯ ಅಮೆರಿಕನ್ನರು ಈ ಬಾರಿಯ ದೀಪಾವಳಿಯನ್ನು ಮನೆಯಲ್ಲೇ ಸರಳವಾಗಿ ಆಚರಿಸಿದರು.

ಈ ದೀಪಾವಳಿ ಸಂದರ್ಭದಲ್ಲಿ ಅಮೆರಿಕದ ಉಪಾಧ್ಯಕ್ಷೆ ಹುದ್ದೆಗೆ ಆಯ್ಕೆಯಾಗಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅವರ ಆಯ್ಕೆಯು ಭಾರತೀಯ ಅಮೆರಿಕನ್ನರ ಖುಷಿಯನ್ನು ದುಪ್ಪಟ್ಟು ಮಾಡಿದೆ. 

ಕಮಲಾ ಹ್ಯಾರಿಸ್‌ ಅವರು ಅಮೆರಿಕದ ಉಪಾಧ್ಯಕ್ಷೆ ಹುದ್ದೆಗೆ ಆಯ್ಕೆಯಾಗಿರುವ ಮೊದಲ ಭಾರತೀಯ ಸಂಜಾತ ಅಮೆರಿಕನ್ನರಾಗಿದ್ದಾರೆ. ಅಲ್ಲದೆ ಕಮಲಾ ಹ್ಯಾರಿಸ್‌ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ. ಅದರಲ್ಲೂ ಈ ಸ್ಥಾನಕ್ಕೆ ಆಯ್ಕೆಯಾದ ಮೊದಲು ಕಪ್ಪು ವರ್ಣೀಯ ಮತ್ತು ಆಫ್ರಿಕನ್‌–ಅಮೆರಿಕನ್‌ ಮಹಿಳೆಯಾಗಿದ್ದಾರೆ.

ಕೊರೊನಾ ಸೋಂಕಿನಿಂದಾಗಿ ಈ ಖುಷಿಯನ್ನು ಸಣ್ಣ ಮಟ್ಟಿಗೆ ಆಚರಿಸಲಾಗುತ್ತಿದೆ. ಇಲ್ಲವಾದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವ ಮೂಲಕ ಭಾರತೀಯ ಅಮೆರಿಕನ್ನರು ಕಮಲಾ ಹ್ಯಾರಿಸ್‌ ಆಯ್ಕೆಯನ್ನು ಸಂಭ್ರಮಿಸುತ್ತಿದ್ದರು.

ಇದನ್ನೂ ಓದಿ: 

‘ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ಬೆಳಕಿನ ಹಬ್ಬವನ್ನು ಹೊಸ ಆರಂಭಗಳೊಂದಿಗೆ ಸಂಭ್ರಮಿಸೋಣ. ಈ ಹಬ್ಬ ಕತ್ತಲೆನಿಂದ ಬೆಳಕಿನೆಡೆಗೆ, ಕೆಟ್ಟದರ ಮೇಲೆ ಒಳ್ಳೆತನದ ವಿಜಯವನ್ನು ಸಾರುತ್ತದೆ. ಈ ವರ್ಷ ದೀಪಾವಳಿ ಇನ್ನಷ್ಟು ಅರ್ಥಪೂರ್ಣವಾಗಿದೆ’ ಎಂದು ಭಾರತೀಯ ಸಂಜಾತ ನಟಿ, ಹ್ಯಾಸಗಾರ್ತಿ ಮಿಂಡಿ ಕಾಲಿಂಗ್‌ ಶುಭಾಶಯ ಕೋರಿದ್ದಾರೆ.

ಸಾಮಾನ್ಯವಾಗಿ ದೀಪಾವಳಿ ಹಬ್ಬದಂದು ಭಾರತೀಯ ಅಮೆರಿಕನ್ನರೆಲ್ಲರೂ ಒಟ್ಟು ಸೇರುತ್ತಾರೆ. ತಮ್ಮ ಹತ್ತಿರದ ದೇವಸ್ಥಾನ, ಗುರುದ್ವಾರಗಳಿಗೆ ಭೇಟಿ ನೀಡುತ್ತಾರೆ. ಧಾರ್ಮಿಕ ಪೂಜಾ ಉತ್ಸವಗಳು ನಡೆಯುತ್ತಿದ್ದವು. ಆದರೆ ಈ ಬಾರಿ  ಸೋಂಕಿನಿಂದ ಎಲ್ಲ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು