ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾಕ್‌: ಕೋವಿಡ್‌ ಚಿಕಿತ್ಸಾ ಕೇಂದ್ರದಲ್ಲಿ ಅಗ್ನಿ ಅವಘಡ, 58 ಮಂದಿ ಸಾವು

ಅಕ್ಷರ ಗಾತ್ರ

ಬಾಗ್ದಾದ್‌: ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದ ವಾರ್ಡ್‌ನಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, 58 ಮಂದಿ ಬೆಂಕಿಗೆ ಆಹುತಿಯಾಗಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.

ದಕ್ಷಿಣ ಇರಾಕ್‌ನ ನಾಸಿರ್‌ಯಾ ನಗರದ ಅಲ್‌-ಹುಸೈನ್‌ ಟೀಚಿಂಗ್‌ ಹಾಸ್ಪಿಟಲ್‌ನಲ್ಲಿ ಸೋಮವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಅಗ್ನಿ ಆಕಸ್ಮಿಕ ಸಂಭವಿಸಿದೆ ಎನ್ನಲಾಗಿದೆ. ಆದರೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಆಮ್ಲಜನಕ ಸಿಲಿಂಡರ್‌ ಸ್ಪೋಟದಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಧಿ ಕ್ವಾರ್‌ ಪ್ರಾಂತ್ಯದ ಮತ್ತೊಂದು ಆರೋಗ್ಯ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇರಾಕ್‌ನ ಆರೋಗ್ಯ ಸಚಿವಾಲಯ ಅಗ್ನಿ ಅನಾಹುತದ ಕಾರಣದ ಬಗ್ಗೆ ಏನೂ ಹೇಳಿಲ್ಲ.

ವಾರ್ಡ್‌ನಲ್ಲಿ 70 ಕೋವಿಡ್‌ ಸೋಂಕಿತರರ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಗ್ನಿ ಅವಘಡ ಸಂಭವಿಸಿದಾಗ ಕನಿಷ್ಠ 63 ರೋಗಿಗಳು ಇದ್ದರು ಎಂದು ಇರಾಕ್‌ನ ನಾಗರಿಕ ರಕ್ಷಣಾ ವಿಭಾಗದ ಮುಖ್ಯಸ್ಥ ಮೇಜರ್‌ ಜೆನರಲ್‌ ಖಾಲಿದ್‌ ಬೊಹನ್ ತಿಳಿಸಿದ್ದಾರೆ.

ಇರಾಕ್‌ ಆಸ್ಪತ್ರೆಗಳಲ್ಲಿ ಒಂದೇ ವರ್ಷದಲ್ಲಿ ಸಂಭವಿಸಿ ಎರಡನೇ ದೊಡ್ಡ ಪ್ರಮಾಣದ ಅಗ್ನಿ ಅನಾಹುತ ಇದಾಗಿದೆ. ಬಾಗ್ದಾದ್‌ನ್‌ ಇಬನ್‌ ಅಲ್‌ ಖತೀಬ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಟ್ಯಾಂಕ್‌ ಸ್ಪೋಟದಿಂದ ಅಗ್ನಿ ದುರಂತ ಏಪ್ರಿಲ್‌ನಲ್ಲಿ ನಡೆದಿತ್ತು. ಕನಿಷ್ಠ 82 ಮಂದಿ ಮೃತಪಟ್ಟಿದ್ದರು ಎಂದು 'ದಿ ಅಸೋಸಿಯೇಟೆಡ್‌ ಪ್ರೆಸ್‌' ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT