ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: ಬ್ರೆಜಿಲ್, ಅಮೆರಿಕ ಸೇರಿ ಜಗತ್ತಿನಾದ್ಯಂತ ಸಾವು ಹೆಚ್ಚಳ

Last Updated 9 ಏಪ್ರಿಲ್ 2021, 4:10 IST
ಅಕ್ಷರ ಗಾತ್ರ

ವಾಷಿಂಗ್ಟನ್: ವಿಶ್ವದಾದ್ಯಂತ ಕೋವಿಡ್–19 ಪ್ರಕರಣಗಳು ಮತ್ತು ಸೋಂಕಿನಿಂದಾಗಿ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೆಲವು ದೇಶಗಳಲ್ಲಿ ದಿನವೊಂದರಲ್ಲಿ ಸೋಂಕಿತರಾಗುತ್ತಿರುವವರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.

ಅಮೆರಿಕದ ಮಿಷಿಗನ್‌ನಲ್ಲಿ ಒಂದೇ ದಿನ 7,000 ಪ್ರಕರಣಗಳು ದೃಢಪಟ್ಟಿವೆ. ಅತಿಹೆಚ್ಚು ಮಂದಿ ಸೋಂಕಿತರಾಗುತ್ತಿರುವ ಅಮೆರಿಕದ ನಗರಗಳ ಪೈಕಿ ನ್ಯೂಯಾರ್ಕ್‌ ನಂತರ ಸ್ಥಾನದಲ್ಲಿದೆ ಮಿಷಿಗನ್‌. ಇತರ ಪಶ್ಚಿಮದ ರಾಜ್ಯಗಳಲ್ಲಿಯೂ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಅಯೋವಾದ ಶಾಲೆಯೊಂದರಲ್ಲಿ 127 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ.

ಬ್ರೆಜಿಲ್‌ನಲ್ಲಿ ಗುರುವಾರ ಒಂದೇ ದಿನ 4,000ಕ್ಕೂ ಹೆಚ್ಚು ಸೋಂಕಿತರು ಮೃತಪಟ್ಟಿದ್ದಾರೆ. ಅಮೆರಿಕ ಹಾಗೂ ಪೆರುವಿನಲ್ಲಿಯೂ ಈ ವಾರ ದಿನವೊಂದರ ಸಾವಿನ ಸಂಖ್ಯೆ 4,000 ದಾಟಿತ್ತು. ಭಾರತದಲ್ಲಿ 1,27,000 ಹೊಸ ಪ್ರಕರಣಗಳು ದೃಢಪಟ್ಟಿವೆ. ಇರಾನ್‌ನಲ್ಲಿ 22,600 ಹೊಸ ಪ್ರಕರಣಗಳು ವರದಿಯಾಗಿವೆ.

ಬ್ರೆಜಿಲ್‌ನ ಒಟ್ಟು 21 ಕೋಟಿ ಜನರಲ್ಲಿ ಶೇ 3ರಷ್ಟು ಮಂದಿಗೆ ಎರಡು ಡೋಸ್ ಲಸಿಕೆ ನೀಡಲಾಗಿದೆ.

ದಕ್ಷಿಣ ಕೊರಿಯಾದಲ್ಲಿ 700 ಹೊಸ ಪ್ರಕರಣಗಳು ವರದಿಯಾಗಿದ್ದು, ಜನವರಿ 5ರ ಬಳಿಕದ ಗರಿಷ್ಠ ಪ್ರಕರಣಗಳಾಗಿವೆ.

ಥಾಯ್ಲೆಂಡ್‌ನಲ್ಲಿ 95 ಸಾವು ಸಂಭವಿಸಿದೆ. ಅಲ್ಲಿ ವೈರಸ್‌ನ ಬ್ರಿಟನ್‌ ರೂಪಾಂತರವು ಈಚೆಗೆ ಪತ್ತೆಯಾಗಿತ್ತು. ಥಾಯ್ಲೆಂಡ್‌ನ ಶೇ 1ರಷ್ಟು ಮಂದಿಗೆ ಮಾತ್ರವೇ ಈವರೆಗೆ ಲಸಿಕೆ ನೀಡಲಾಗಿದೆ.

ಈ ಮಧ್ಯೆ, ರೂಪಾಂತರ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದೆ. ಅದೀಗ ಅಮೆರಿಕದಾದ್ಯಂತ ಹರಡಿದೆ. ಹೆಚ್ಚು ಜನ ಸೋಂಕಿತರಾಗಲು ಕಾರಣವಾಗುತ್ತಿದೆ ಎಂದು ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರ ಹೇಳಿದೆ.

ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಕೋವಿಡ್ ಟ್ರ್ಯಾಕರ್ ಮಾಹಿತಿ ಪ್ರಕಾರ, ವಿಶ್ವದಾದ್ಯಂತ ಈವರೆಗೆ 13.37 ಕೋಟಿಗೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. 29 ಲಕ್ಷಕ್ಕೂ ಹೆಚ್ಚು ಸೋಂಕಿತರು ಅಸುನೀಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT