ಭಾನುವಾರ, ನವೆಂಬರ್ 1, 2020
20 °C

ಜಾರ್ಜ್‌ ಫ್ಲಾಯ್ಡ್ ಸಾವಿನ ಪ್ರಕರಣ: ವಿಚಾರಣೆ ವಿಡಿಯೊ ಚಿತ್ರೀಕರಣಕ್ಕೆ ಆಗ್ರಹ

ಎಪಿ Updated:

ಅಕ್ಷರ ಗಾತ್ರ : | |

Prajavani

ಮಿನಿಯಾಪೊಲಿಸ್: ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವಿನ ಪ್ರಕರಣದ ವಿಚಾರಣೆಯ ವಿಡಿಯೊ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ಕುರಿತು ನ್ಯಾಯಾಲಯ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ.

ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವಾದ ಪೊಲೀಸರ ಹಿಂಸೆ ವಿರುದ್ಧ ವಿಶ್ವದ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಇಂತಹ ಪ್ರಕರಣದ ವಿಚಾರಣೆ ವೀಕ್ಷಿಸುವ ಅವಕಾಶ ಜನರಿಗೆ ಇರಬೇಕು. ಕೋವಿಡ್ ಹಿನ್ನೆಲೆಯಲ್ಲಿ ಕ್ಯಾಮೆರಾಗಳ ಉಪಸ್ಥಿತಿಗೆ ಅವಕಾಶ ಕಲ್ಪಿಸುವುದು ಸೂಕ್ತ ಮತ್ತು ಇದು ಅದಕ್ಕೆ ಅರ್ಹವಾದ ಪ್ರಕರಣ ಎಂಬ ಆಗ್ರಹ ಈಗ ಕೇಳಿಬಂದಿದೆ.

ಆದರೆ, ಇದಕ್ಕೆ ಮಿನಿಯಾಪೊಲೀಸ್ ರಾಜ್ಯದ ಅಟಾರ್ನಿ ಜನರಲ್ ವಿರೋಧವ್ಯಕ್ತಪಡಿಸಿದ್ದಾರೆ. ಕ್ಯಾಮೆರಾಗಳ ಉಪಸ್ಥಿತಿಯಿಂದ ಸಮಸ್ಯೆ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಇಂತಹ ಪ್ರಕರಣಗಳ ವಿಚಾರಣೆ ಹೇಗೆ ನಡೆಯುತ್ತದೆ ಎಂದು ತಿಳಿಯುವ ಕುತೂಹಲ ಜನರಲ್ಲಿ ಇರುತ್ತದೆ. ವಿಚಾರಣೆ ನೋಡಲು ಸಾಧ್ಯವಾಗದಿದ್ದರೆ, ಸಾರ್ವಜನಿಕರು ಅದನ್ನು ನಂಬುವುದಿಲ್ಲ’ ಎಂದು ಸಿಲ್ಹಾ ಸೆಂಟರ್ ಫಾರ್ ದಿ ಸ್ಟಡಿ ಆಫ್ ಮಿಡಿಯಾ ಎಥಿಕ್ಸ್ ಅಂಡ್ ಲಾ ಸಂಸಥೆಯ ನಿರ್ದೇಶಕ ಜೇನ್ ಕಿರ್ಟ್ಲಿ ಅವರು ಅಭಿಪ್ರಾಯಪಟ್ಟರು.

ಈ ವರ್ಷದ ಜೂನ್ ತಿಂಗಳಲ್ಲಿ ನ್ಯಾಯಮೂರ್ತಿ ಪೀಟರ್ ಕಹಿಲ್ ಅವರು, ಪೂರ್ವ ವಿಚಾರಣೆ ಕಲಾಪದ ಧ್ವನಿಮುದ್ರಣ ಮತ್ತು ವಿಡಿಯೊ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸದಿರಲು ನಿರ್ಧರಿಸಿದ್ದರು. ಈಗ ಕ್ಯಾಮೆರಾಗಳ ಉಪಸ್ಥಿತಿಗೆ ಅವಕಾಶ ನೀಡುವ ಕುರಿತು ನಂತರ ತೀರ್ಮಾನ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ, ರೂಲಿಂಗ್ ಎಂದು ಹೊರಬೀಳಲಿದೆ ಎಂಬುದು ಸ್ಪಷ್ಟವಿಲ್ಲ.

ಈ ವರ್ಷದ ಮೇ 25ರಂದು ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಅವರು ಪೊಲೀಸರ ಹಿಂಸೆಯಿಂದಾಗಿ ಮೃತಪಟ್ಟಿದ್ದರು. ಸರ್ವರ್ಣೀಯ ಅಧಿಕಾರಿಯು ಫ್ಲಾಯ್ಡ್ ಕತ್ತಿನ ಮೇಲೆ ಮಂಡಿಯೂರಿದ್ದರಿಂದ ಉಸಿರಾಡಲಾಗದೇ ಅಸುನೀಗಿದ್ದರು. ಅಧಿಕಾರಿ ಡೆರ್ರೆಕ್ ಚೌವಿನ್ ಸೇರಿ ನಾಲ್ವರು ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು