ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಭಾರತದ ಅಂಗವಿಕಲರಿಗೆ ಅಮೆರಿಕ ಸಂಸ್ಥೆಯಿಂದ ₹72 ಲಕ್ಷ ನೆರವು

Last Updated 1 ಜೂನ್ 2021, 5:51 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತೀಯ ಅಮೆರಿಕನ್‌ ಸ್ವಯಂಸೇವಾ ಸಂಸ್ಥೆಯೊಂದು ಕೋವಿಡ್‌ ಸಾಂಕ್ರಾಮಿಕದಿಂದ ಸಂಕಷ್ಟಕ್ಕೊಳಗಾಗಿರುವ ಅಂಗವಿಕಲರಿಗೆ ನೆರವಾಗಲು ₹72.54 ಲಕ್ಷ (1 ಲಕ್ಷ ಡಾಲರ್‌) ಸಂಗ್ರಹಿಸಿದೆ.

‘ಸಾಂಕ್ರಾಮಿಕದ ಸಂದರ್ಭದಲ್ಲಿ ಅಂಗವಿಕಲರಿಗೆ ದಿನಸಿ, ಪಿಪಿಇ ಕಿಟ್‌ ಸೇರಿದಂತೆ ಇತರೆ ವಸ್ತುಗಳನ್ನು ಒದಗಿಸಲು 1 ಲಕ್ಷ ಡಾಲರ್‌ ಸಂಗ್ರಹಿಸಲಾಗಿದೆ’ ಎಂದು ಲಾಸ್‌ ಏಜಂಲೀಸ್‌ ಮೂಲದ ‘ವಾಯ್ಸ್ ಆಫ್‌ ಸ್ಪೆಷಲಿ ಏಬಲ್ಡ್‌ ಪೀಪಲ್‌’(ವಿಒಎಸ್‌ಎಪಿ) ಸಂಘಟನೆಯು ಸೋಮವಾರ ತಿಳಿಸಿದೆ.

‘ಕೋವಿಡ್‌ನಿಂದಾಗಿ ಹಿರಿಯ ನಾಗರಿಕರು, ಅಂಗವಿಕಲರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಭಾರತದಲ್ಲಿ ಈವರೆಗೆ 4,500ಕ್ಕೂ ಹೆಚ್ಚು ದಿನಸಿ ಮತ್ತು ಪಿಪಿಇ ಕಿಟ್‌ಗಳನ್ನು ವಿತರಿಸಲಾಗಿದ್ದು, 10,000 ಅಂಗವಿಕಲರನ್ನು ತಲುಪುವ ಗುರಿಯನ್ನು ಹೊಂದಿದ್ದೇವೆ’ ಎಂದು ಎನ್‌ಜಿಒ ಹೇಳಿಕೆ ಬಿಡುಗಡೆ ಮಾಡಿದೆ.

‘ಭಾರತದ ಕಾರ್ಯನಿರ್ವಾಹಕ ಪಾಲುದಾರರಬಿ‍ಪಿಎ ನೆರವಿನೊಂದಿಗೆ ಕರ್ನಾಟಕದ ಬೆಳಗಾವಿ, ಮಧ್ಯಪ್ರದೇಶದ ನಾಗ್ಡಾ ಮತ್ತು ಗುಜರಾತ್‌ನ ಹಲವು ಜಿಲ್ಲೆಗಳಿಗೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಹೈದರಾಬಾದ್‌ ಮತ್ತು ಪುಣೆಗೂ ಇದನ್ನು ವಿಸ್ತರಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT