ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಮೇ ಅಂತ್ಯದ ವರೆಗೆ ಅಂತರರಾಷ್ಟ್ರೀಯ ವಿಮಾನ ಹಾರಟ ನಿರ್ಬಂಧಿಸಿದ ಶ್ರೀಲಂಕಾ

Last Updated 20 ಮೇ 2021, 13:51 IST
ಅಕ್ಷರ ಗಾತ್ರ

ಕೊಲೊಂಬೊ: ಕೋವಿಡ್-‌19 ಸೋಂಕು ಪ್ರಕರಣಗಳ ಏರಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಶ್ರೀಲಂಕಾ ಸರ್ಕಾರ, ಮೇ ಅಂತ್ಯದ ವರೆಗೆಅಂತರರಾಷ್ಟ್ರೀಯವಿಮಾನ ಸಂಚಾರಕ್ಕೆ ನಿರ್ಬಂಧಹೇರುವುದಾಗಿ ಅಲ್ಲಿನ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ʼಶ್ರೀಲಂಕಾದಲ್ಲಿನ ಎಲ್ಲ ವಿಮಾನ ನಿಲ್ದಾಣಗಳಿಗೆ ವಿದೇಶಿ ಪ್ರಯಾಣಿಕರು ಪ್ರವೇಶಿಸುವುದನ್ನು ಮೇ21ರ ಮಧ್ಯರಾತ್ರಿಯಿಂದ31ರ ಮಧ್ಯರಾತ್ರಿಯ ವರೆಗೆನಿರ್ಬಂಧಿಸಲಾಗುವುದು. ದೇಶದಲ್ಲಿ ಕೋವಿಡ್‌ ನಿಯಂತ್ರಿಸುವ ಸಲುವಾಗಿ ಈ ನಿರ್ಧಾರವು ತಕ್ಷಣದಿಂದಲೇ ಜಾರಿಗೆ ಬರಲಿದೆʼ ಎಂದು ತಿಳಿಸಿದೆ.

ಈ ಅವಧಿಯಲ್ಲಿ ದೇಶದಿಂದ ಹೊರ ಹೋಗಲು ಬಯಸುವವರು ಹೋಗಲು ಅವಕಾಶವಿದೆ.ಅಂತರರಾಷ್ಟ್ರೀಯ ವಿಮಾನಗಳ ಮೂಲಕ ವಾಪಸ್‌ ಆಗುವವರಿದ್ದರೆ(ವಿಮಾನ ಆಗಮಿಸಿದ 12 ಗಂಟೆಯೊಳಗೆ ವಾಪಸ್‌ ತೆರಳಲು) ಅವಕಾಶವಿದೆ ಎಂದೂ ತಿಳಿಸಿದೆ.

ಶ್ರೀಲಂಕಾದಲ್ಲಿ ಕೋವಿಡ್‌ ಮೂರನೇ ಅಲೆ ಕಾಣಿಸಿಕೊಂಡಿದ್ದು, ದೇಶದಾದ್ಯಂತ ಸುಮಾರು1,51,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.1,051 ಸೋಂಕಿತರು ಮೃತಪಟ್ಟಿದ್ದು, ಬುಧವಾರ ಒಂದೇದಿನ3,623 ಹೊಸ ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT