ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update | ಕೋವಿಡ್ ಪ್ರಕರಣಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಭಾರತ

Last Updated 11 ಸೆಪ್ಟೆಂಬರ್ 2020, 4:00 IST
ಅಕ್ಷರ ಗಾತ್ರ
ADVERTISEMENT
""

ವಾಷಿಂಗ್ಟನ್: ವರ್ಡೊ ಮೀಟರ್‌ ಮಾಹಿತಿಯ ಪ್ರಕಾರ, ಜಾಗತಿಕವಾಗಿ 70,56,068 ಕೊರೊನಾ ಸೋಂಕಿನ ಪ್ರಕರಣಗಳು ಸಕ್ರಿಯವಾಗಿದ್ದು 60,546 ಸೋಂಕಿತರ ಸ್ಥಿತಿ ಚಿಂತಾಜಕವಾಗಿದೆ. ವಿಶ್ವದ ಕೋವಿಡ್ ಪ್ರಕರಣಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಏರಿಕೆ.

ಅಮೆರಿಕದಲ್ಲಿ ಒಟ್ಟು ಕೋವಿಡ್‌ ಪ್ರಕರಣಗಳು 65,59,509 ದಾಖಲಾಗಿದ್ದು, ಭಾರತದಲ್ಲಿ 45,47,402 ಪ್ರಕರಣಗಳಿಗೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿನಿಂದ 76,155 ಮಂದಿ ಸಾವಿಗೀಡಾಗಿದ್ದು, 9,40,035 ಸಕ್ರಿಯ ಪ್ರಕರಣಗಳಿವೆ.

ಸೋಂಕು ಕಡಿಮೆ ಇರುವ ದೇಶಗಳಲ್ಲೂ ಕೊರೊನಾ ವೈರಸ್‌ ವೇಗವಾಗಿ ಹರಡುತ್ತಿದ್ದು ಯುಎಇ, ಜೆಕ್‌ ಗಣರಾಜ್ಯ ದೇಶಗಳಲ್ಲೂ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಬುಧವಾರ ಒಂದೇ ಯುಎಇ ಹಾಗೂ ಜೆಕ್‌ ಗಣರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಜಾಗತಿಕವಾಗಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು 9 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಕೊರೊನಾ ವೈರಸ್‌ ವರ್ಡೊ ಮೀಟರ್‌ ತಿಳಿಸಿದೆ. ಈವರೆಗೆ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 2,81,81,352ಕ್ಕೆ ಮುಟ್ಟಿದ್ದು, 9,10,686 ಮಂದಿ ಮೃತಪಟ್ಟಿದ್ದಾರೆ. 2,02,14,598 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 70,56,068 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ.

ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿ, ಭಾರತ ಎರಡನೇ ಸ್ಥಾನದಲ್ಲಿ ಮುಂದುವರೆದಿವೆ. ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ 65,59,509 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಸದ್ಯ 1,95,590 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
38,56,749 ಜನರು ಈ ವರೆಗೆ ಚೇತರಿಸಿಕೊಂಡಿದ್ದಾರೆ.

ಭಾರತದಲ್ಲಿ ಈವರೆಗೆ ಸೋಂಕು ತಗುಲಿದವರ ಸಂಖ್ಯೆ 43,70,129ಕ್ಕೆ ಏರಿಕೆಯಾಗಿದೆ. 33,98,845 ಜನ ಗುಣಮುಖರಾಗಿದ್ದಾರೆ. 73,890 ಸಾವು ಸಂಭವಿಸಿದ್ದು, ಸದ್ಯ 8,97,394 ಸಕ್ರಿಯ ಪ್ರಕರಣಗಳಿವೆ.

ಬ್ರೆಜಿಲ್‌ನಲ್ಲಿ 41,65,124 ರಷ್ಯಾದಲ್ಲಿ 10,41,007, ಪೆರುವಿನಲ್ಲಿ 6,96,190, ಕೊಲಂಬಿಯಾದಲ್ಲಿ 6,79,513 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT