ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World update: ಜಾಗತಿಕವಾಗಿ 4 ಕೋಟಿಯತ್ತ ಕೋವಿಡ್‌ ಸೋಂಕಿತರು

Last Updated 17 ಅಕ್ಟೋಬರ್ 2020, 7:16 IST
ಅಕ್ಷರ ಗಾತ್ರ
ADVERTISEMENT
""

ವಾಷಿಂಗ್ಟನ್‌‌: ಜಾಗತಿಕವಾಗಿ ಕೊರೊನಾ ವೈರಸ್ ಸೋಂಕು ಹರಡುವಿಕೆ ತೀವ್ರಗೊಂಡಿದ್ದು ಅಮೆರಿಕದಲ್ಲಿ ಎರಡು ಲಸಿಕೆಗಳ ಅಂತಿಮ ಹಂತದ ಪ್ರಾಯೋಗಿಕ ಪರೀಕ್ಷೆ ನವೆಂಬರ್‌ ಅಂತ್ಯಕ್ಕೆ ಮುಗಿಯಲಿದೆ ಎಂದು ಅಮೆರಿಕದ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಅಮೆರಿಕ ಸ್ಥಳೀಯವಾಗಿ ತಯಾರಿಸುತ್ತಿರುವ ಎರಡು ಲಸಿಕೆಗಳ ಕ್ಲಿನಿಕಲ್‌ ಪರೀಕ್ಷೆಯ ಎರಡನೇ ಯಶಸ್ವಿಯಾಗಿದ್ದು ಮೂರನೇ ಹಂತ ಬರುವ ನವೆಂಬರ್‌ ಅಂತ್ಯಕ್ಕೆ ಮುಕ್ತಾಯವಾಗಲಿದೆ. ಈಗಾಗಲೇ ಜಾಗತಿಕವಾಗಿ ಎರಡನೇ ಹಂತದ ಅಲೆಯ ಭೀತಿ ಎದುರಾಗಿರುವ ಬೆನ್ನಲೇ ಲಸಿಕೆ ಯಶಸ್ವಿಯಾಗುತ್ತಿರುವುದು ಜನರಲ್ಲಿರುವ ಆತಂಕ ದೂರವಾಗುತ್ತಿದೆ ಎಂದು ಅಮೆರಿಕ ಹೇಳಿದೆ.

ಭಾರತ, ಅಮೆರಿಕ, ಬ್ರೆಜಿಲ್‌, ಸ್ಪೇನ್‌ನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಸೋಂಕಿತರ ಸಂಖ್ಯೆ 4 ಕೋಟಿ ಸಮೀಪಿಸುತ್ತಿದೆ. ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 830 ಜನರು ಮೃತಪಟ್ಟಿದ್ದಾರೆ.

ವರ್ಡೊ ಮೀಟರ್‌ ವೆಬ್‌ಸೈಟ್ ಮಾಹಿತಿ ಪ್ರಕಾರ, ಈವರೆಗೆ ವಿಶ್ವದಾದ್ಯಂತ 3,95,93,953 ಜನ ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 11,09,252 ಜನರು ಮೃತಪಟ್ಟಿದ್ದಾರೆ. 2,96,61,167 ಜನರು ಗುಣಮುಖರಾಗಿದ್ದಾರೆ. 88,23,534 ಜನರು ಜಾಗತಿಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ 8,288,278 ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ 7,432,680 ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ 5,201,570 ಪ್ರಕರಣಗಳು ದಾಖಲಾಗಿವೆ.

ರಷ್ಯಾದಲ್ಲಿ 13,69,313, ಸ್ಪೆನ್‌ 9,82,723, ಪೆರುವಿನಲ್ಲಿ8,62,417 ಮತ್ತು ಮೆಕ್ಸಿಕೊದಲ್ಲಿ 8,41,661 ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT