ವಿಶ್ವಸಂಸ್ಥೆ: ಜಾಗತಿಕವಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು ಇಲ್ಲಿಯವರೆಗೂ 3,13,74,796 ಪ್ರಕರಣಗಳು ದೃಢಪಟ್ಟಿದ್ದು 9,65,893 ಜನರ ಬಲಿಯಾಗಿದ್ದಾರೆ. ಸುಮಾರು ಸೋಂಕಿತರು 2,15,38,612 ಗುಣಮುಖರಾಗಿದ್ದಾರೆ.

ಕಳೆದ ವಾರ ವಿಶ್ವದಾದ್ಯಂತ ದಾಖಲೆಯ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ವರದಿ ಮಾಡಿದೆ. ಈ ಅವಧಿಯಲ್ಲಿ ಸುಮಾರು 2 ಮಿಲಿಯನ್ ಸೋಂಕಿತರು ಪತ್ತೆಯಾಗಿದ್ದಾರೆ.
ಸೆಪ್ಟೆಂಬರ್ 14 ರಿಂದ 20ರ ಅವಧಿಯಲ್ಲಿ ಸುಮಾರು ಎರಡು ಮಿಲಿಯನ್ ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಇದು ಹಿಂದಿನ ವಾರಕ್ಕೆ ಹೋಲಿಸಿದರೆ ಶೇ 6ರಷ್ಟು ಹೆಚ್ಚಳವಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ರಷ್ಯಾದ ಕೋವಿಡ್ ಲಸಿಕೆ ಭಾರತದಲ್ಲಿ ಮುಂದಿನ ವಾರದಲ್ಲಿ ಪ್ರಾಯೋಗಿಕ ಪರೀಕ್ಷೆ ಒಳಪಡಲಾಗಿದೆ. ಸುಮಾರು 10 ಲಸಿಕೆಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ.

ಅಮೆರಿಕ, ಭಾರತ, ಬ್ರೆಜಿಲ್, ರಷ್ಯಾ, ಪೆರು ಕೋವಿಡ್ನಿಂದ ಅತಿ ಹೆಚ್ಚು ಸಂಕಷ್ಟ ಎದುರಿಸಿದ ರಾಷ್ಟ್ರಗಳು. ಅಮೆರಿಕದಲ್ಲಿ 68,61,211 ಮಂದಿ ಸೋಂಕಿತರಿದ್ದರೆ, 2,00,005 ಮಂದಿ ಸಾವಿಗೀಡಾಗಿದ್ದಾರೆ. ಭಾರತದಲ್ಲಿ5,62,663 ಕೋವಿಡ್ ಪ್ರಕರಣಗಳಿದ್ದರೆ, 88,935 ಮಂದಿ ಮೃತಪಟ್ಟಿದ್ದಾರೆ. ಬ್ರೆಜಿಲ್ನಲ್ಲಿ 45,58,040 ಸೋಂಕಿತರಿದ್ದು, 1,37,272 ಮಂದಿ ಮಹಾಮಾರಿಗೆ ಪ್ರಾಣ ತೆತ್ತಿದ್ದಾರೆ. ರಷ್ಯಾದಲ್ಲಿ 11,1,157 , ಪೆರು 7,68,895 ಪ್ರಕರಣಗಳಿವೆ ಎಂದು ಅಮೆರಿಕದ ‘ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೋವಿಡ್ ಟ್ರ್ಯಾಕರ್ ವೆಬ್ಸೈಟ್’ನಲ್ಲಿ ಉಲ್ಲೇಖಿಸಲಾಗಿದೆ.

ಚೀನಾದಲ್ಲಿ ಹೇಗಿದೆ ಪರಿಸ್ಥಿತಿ

ಸೋಂಕಿನ ಮೂಲ ಚೀನಾದಲ್ಲಿ ಸದ್ಯ 90,376 ಸೋಂಕು ಪ್ರಕರಣಗಳಿದ್ದು, ಅಲ್ಲಿನ ಒಟ್ಟಾರೆ ಸಾವಿನ ಸಂಖ್ಯೆ 4,737 ಮಾತ್ರ. ಸೆ.21 ರಂದು ಅಲ್ಲಿ ಕೇವಲ 6 ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಸೆ. 20 ರಂದು ಅಲ್ಲಿ 12 ಪ್ರಕರಣಗಳು ಪತ್ತೆಯಾಗಿದ್ದವು. ಗಮನಿಸಬೇಕಾದ ವಿಚಾರವೆಂದರೆ ಸೆ.21ರಂದು ವರದಿಯಾಗಿರುವ ಪ್ರಕರಣಗಳೆಲ್ಲ ವಿದೇಶ ಮೂಲದ್ದಾಗಿವೆ.

ಮೆಕ್ಸಿಕೊದಲ್ಲಿ ಅಧಿಕೃತ ಸಂಖ್ಯೆಗಿಂತಲೂ ಹೆಚ್ಚಿದೆಯೇ ಕೋವಿಡ್?

ಮೆಕ್ಸಿಕೊದಲ್ಲಿ 7,00,000 ಲಕ್ಷ ಕೊರೊನಾ ವೈರಸ್ ಪ್ರಕರಣಗಳಿವೆ ಎಂದು ಹೇಳಿರುವ ಅಲ್ಲಿನ ಸರ್ಕಾರ, ನೈಜ ಸಂಖ್ಯೆ ಇದಕ್ಕಿಂತಲೂ ಹೆಚ್ಚಿರಬಹುದು ಎಂದೂ ಅನುಮಾನಪಟ್ಟಿದೆ. ಮೆಕ್ಸಿಕೊದಲ್ಲಿ ಸಾವಿನ ಪ್ರಮಾಣವೂ ಅಧಿಕವಾಗಿದೆ. 73,493 ಮಂದಿ ಈ ವರೆಗೆ ಅಲ್ಲಿ ಪ್ರಾಣ ಬಿಟ್ಟಿದ್ದಾರೆ. ಕೋವಿಡ್ನಿಂದ ಹೆಚ್ಚು ಸಾವು ಸಂಭವಿಸಿದ ರಾಷ್ಟ್ರಗಳ ಸಾಲಿನಲ್ಲಿ ಮೆಕ್ಸಿಕೊ ನಾಲ್ಕನೇ ಸ್ಥಾನದಲ್ಲಿದೆ.

ಬ್ರಿಟನ್ನಲ್ಲಿ ಎರಡನೇ ಅಲೆಗೆ ತತ್ತರಿಸಿದ ಸರ್ಕಾರ

ಬ್ರಿಟನ್ನಲ್ಲಿ ಕೊರೊನಾ ವೈರಸ್ನ ಎರಡನೇ ಅಲೆ ಜೋರಾಗಿಯೇ ಹೊಡೆತ ನೀಡುತ್ತಿದೆ. ಇದರಿಂದ ಜನ ಮತ್ತು ಸರ್ಕಾರದಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಮತ್ತೊಮ್ಮೆ ಲಾಕ್ಡೌನ್ ನಿಯಮಾವಳಿಗಳನ್ನು ಬಿಗಿಗೊಳಿಸಲಾಗುತ್ತಿದೆ. ಬ್ರಿಟನ್ನಲ್ಲಿ ಕೋವಿಡ್ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಜನಪ್ರತಿನಿಧಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಅಲ್ಲಿ 4,01,122 ಪ್ರಕರಣಗಳಿದ್ದು, 41,877 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.