ಶುಕ್ರವಾರ, ಸೆಪ್ಟೆಂಬರ್ 17, 2021
23 °C
ವಿಶ್ವದಾದ್ಯಂತ 3.85 ಕೋಟಿಗೂ ಹೆಚ್ಚು ಸೋಂಕಿತರು

Covid-19 World update: ಸ್ಪೇನ್‌ನಲ್ಲಿ 11,970 ಹೊಸ ಪ್ರಕರಣ, 209 ಸಾವು

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Covid-19

ಮ್ಯಾಡ್ರಿಡ್: ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆ ಮತ್ತೆ ತೀವ್ರಗೊಂಡಿದೆ. ಸ್ಪೇನ್‌ನಲ್ಲಿ ಒಂದೇ ದಿನ 11,970 ಹೊಸ ಪ್ರಕರಣಗಳು ದೃಢಪಟ್ಟಿದ್ದು, 209 ಮಂದಿ ಮೃತಪಟ್ಟಿದ್ದಾರೆ.

ಇದರೊಂದಿಗೆ, ಸ್ಪೇನ್‌ನಲ್ಲಿ ಈವರೆಗೆ ಸೋಂಕು ತಗುಲಿದವರ ಸಂಖ್ಯೆ 9,37,311ಕ್ಕೆ ಏರಿಕೆಯಾಗಿದ್ದು, 33,413 ಮಂದಿ ಸಾವಿಗೀಡಾಗಿದ್ದಾರೆ.

ಭಾರತದಲ್ಲಿಯೂ ಒಂದೇ ದಿನ 64,722 ಪ್ರಕರಣಗಳು ವರದಿಯಾಗಿದ್ದು, 655 ಮರಣ ಸಂಭವಿಸಿದೆ.

ವರ್ಡೊ ಮೀಟರ್‌ ವೆಬ್‌ಸೈಟ್ ಮಾಹಿತಿ ಪ್ರಕಾರ, ಈವರೆಗೆ ವಿಶ್ವದಾದ್ಯಂತ 3.85 ಕೋಟಿಗೂ ಹೆಚ್ಚು ಜನ ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 10.93 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 2.89 ಕೋಟಿಗೂ ಹೆಚ್ಚು ಜನರು ಗುಣಮುಖರಾಗಿದ್ದಾರೆ. 84,99,162 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ: 

ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ ಒಟ್ಟು 81,08,686 ಮಂದಿಗೆ ಸೋಂಕು ದೃಢಪಟ್ಟಿದೆ. ಈವರೆಗೂ 2,21,180 ಮಂದಿ ಸಾವಿಗೀಡಾಗಿದ್ದಾರೆ. 52,39,326 ಸೋಂಕಿತರು ಈ ವರೆಗೆ ಚೇತರಿಸಿಕೊಂಡಿದ್ದಾರೆ.

ಬ್ರೆಜಿಲ್‌ನಲ್ಲಿ 51,17,825, ರಷ್ಯಾದಲ್ಲಿ 13,40,409, ಕೊಲಂಬಿಯಾದಲ್ಲಿ 9,24,098, ಪೆರುವಿನಲ್ಲಿ 8,53,974, ಬ್ರಿಟನ್‌ನಲ್ಲಿ 6,54,644 ಮತ್ತು ಮೆಕ್ಸಿಕೊದಲ್ಲಿ 8,25,340 ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು