ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಿಂದ ಕೋವಿಡ್‌ ಬಂತು, ಅಮೆರಿಕದಿಂದ ಉತ್ತಮ ಲಸಿಕೆ ಬಂತು: ಸೆನೆಟರ್ ಜಾನ್ ಕೆನಡಿ

ರಿಪಬ್ಲಿಕನ್ ಪಕ್ಷದ ಪ್ರಭಾವಿ ಸೆನೆಟರ್ ಜಾನ್ ಕೆನಡಿ
Last Updated 9 ಜೂನ್ 2021, 5:35 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಕೊರೊನಾವೈರಸ್‌ ಚೀನಾದಿಂದ ಬಂತು, ಅದು ಹಬ್ಬಿಸಿದ ರೋಗವನ್ನು ನಿಯಂತ್ರಿಸುವ ಅತ್ಯುತ್ತಮ ಲಸಿಕೆಗಳು ಅಮೆರಿಕದಿಂದ ಬಂದಿವೆ‘ ಎಂದು ಅಮೆರಿಕದ ರಿಪಬ್ಲಿಕನ್ ಪಕ್ಷದ ಪ್ರಭಾವಿ ಸೆನೆಟರ್‌ ಹೇಳಿದ್ದಾರೆ.

ಭಾರತ ಸೇರಿದಂತೆ ಕೊರೊನಾ ಸಾಂಕ್ರಾಮಿಕದ ವಿರುದ್ಧದ ಹೋರಾಟ ನಡೆಸುತ್ತಿರುವ ವಿವಿಧ ರಾಷ್ಟ್ರಗಳಿಗೆ ಅಮೆರಿಕ ಕೋವಿಡ್ ಲಸಿಕೆಗಳು ಹಾಗೂ ವೈದ್ಯಕೀಯ ಪರಿಕರಗಳನ್ನು ಪೂರೈಸುತ್ತಿರುವ ನಡುವೆ, ಸೆನೆಟರ್‌ ಜಾನ್‌ ಕೆನಡಿ ಹೀಗೆ ಹೇಳಿಕೆ ನೀಡಿದ್ದಾರೆ.

‘ಕೊರೊನಾ ಸಾಂಕ್ರಾಮಿಕ ರೋಗ ಇನ್ನೂ ಮುಗಿದಿಲ್ಲ. ಅಮೆರಿಕದಲ್ಲಿ ಪರಿಸ್ಥಿತಿ ಉತ್ತಮವಾಗಿದೆ. ಆದರೆ, ದಕ್ಷಿಣ ಅಮೆರಿಕದಲ್ಲಿ ಸೋಂಕಿನ ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ. ಆಫ್ರಿಕಾದ ಉಪ–ಸಹರಾದ ಆಫ್ರಿಕಾದಲ್ಲೂ ಪರಿಸ್ಥಿತಿ ಸುಧಾರಿಸಿಲ್ಲ. ಹಾಗೆಯೇ ಭಾರತದಲ್ಲೂ ಪರಿಸ್ಥಿತಿ ಪರವಾಗಿಲ್ಲ ಎನ್ನುವ ಹಂತದಲ್ಲಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಸುಧಾರಿಸಿಲ್ಲ‘ ಎಂದು ಜಾನ್ ಹೇಳಿದ್ದಾರೆ.

‘ತಮ್ಮ ದೇಶದ ನಾಯಕತ್ವ ಹೇಗಿರುತ್ತದೆ ಎಂಬುದನ್ನು ಜಗತ್ತಿಗೆ ಪ್ರದರ್ಶಿಸಲು ಇದೀಗ ಅಮೆರಿಕಕ್ಕೆ ಉತ್ತಮ ಅವಕಾಶವಿದೆ‘‌ ಎಂದು ಅವರು ಹೇಳಿದ್ದಾರೆ.

‘ಜೀವಗಳನ್ನು ಉಳಿಸುವುದಕ್ಕಾಗಿ ಉತ್ತಮ ಕೆಲಸ ಮಾಡಲು ಈಗ ನಮಗೊಂದು ಅವಕಾಶ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಾವು ಸ್ಮಾರ್ಟ್‌ ಆಗಿ ಕೆಲಸ ಮಾಡಬೇಕಿದೆ‘ ಎಂದಿದ್ದಾರೆ.

‘ಅಮೆರಿಕದಂತಹ ಹಲವು ರಾಷ್ಟ್ರಗಳು ಲಸಿಕೆ ತಯಾರಿಸಿ ಮತ್ತು ಸಂಗ್ರಹಿಸಿ, ವಿತರಿಸುವ ಸಾಮರ್ಥ್ಯವನ್ನು ಹೊಂದಿವೆ. ಆದರೆ, ಬಹುತೇಕ ರಾಷ್ಟ್ರಗಳು ಹಾಗೆ ಮಾಡುವುದಿಲ್ಲ. ಹಾಗೆ ಮಾಡಿದರೆ, ಅದು ಅಪಾಯಕಾರಿ, ಹಾಗೆಯೇ ಅನೈತಿಕ. ಅಷ್ಟೇ ಅಲ್ಲ, ನಾವು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದಂತೆ ಆಗುವುದಿಲ್ಲ. ವೈರಸ್ ರೂಪಾಂತರಗೊಳ್ಳುವುದರಿಂದ, ಇದು ಅಮೆರಿಕಕ್ಕೂ ಅಪಾಯ‘ ಎಂದು ಸೆನಟರ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಸಂಸ್ಥೆ ಬೆಂಬಲಿತ ‘ಕೋವ್ಯಾಕ್ಸ್‌‘ ಜಾಗತಿಕ ಲಸಿಕೆ ಹಂಚಿಕೆ ಕಾರ್ಯಕ್ರಮದ ಮೂಲಕ ಹಲವು ದೇಶಗಳಿಗೆ ಶೇ 75ರಷ್ಟು ಲಸಿಕೆಯನ್ನು ಪೂರೈಸುವುದಾಗಿ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದರು. ಅಂದರೆ ಅಮೆರಿಕದಲ್ಲಿ ಬಳಕೆಯಾಗದ ದಾಸ್ತಾನಾಗಿರುವ ಲಸಿಕೆಗಳಲ್ಲಿ ಸುಮಾರು 1.9 ಕೋಟಿ ಡೋಸ್‌ ಲಸಿಕೆಗಳನ್ನು ನೀಡುವುದಾಗಿ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT