ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update | 2.57 ಕೋಟಿ ಕೊರೊನಾ ಸೋಂಕಿತರು, 1,70 ಕೋಟಿ ಜನ ಗುಣಮುಖ

Last Updated 2 ಸೆಪ್ಟೆಂಬರ್ 2020, 8:48 IST
ಅಕ್ಷರ ಗಾತ್ರ

ವಾಷಿಂಗ್ಟನ್: ಜಗತ್ತಿನಾದ್ಯಂತ ಸುಮಾರು 2.57 ಕೋಟಿ ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 8.57 ಲಕ್ಷ ಜನರು ಸಾವಿಗೀಡಾಗಿದ್ದಾರೆ.

ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್‌ ಸೆಂಟರ್ ಪ್ರಕಾರ, ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 2,57,61,430ಗೆ ಮುಟ್ಟಿದ್ದು, 8,57,263 ಮಂದಿ ಮೃತಪಟ್ಟಿದ್ದಾರೆ. 1,70,77,800 ಸೋಂಕಿತರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಸೋಂಕು ಪ್ರಕರಣಗಳಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ 60,75,652 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಸದ್ಯ 1,84,689 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2,202,663 ಜನರು ಈವರೆಗೆ ಗುಣಮುಖರಾಗಿದ್ದಾರೆ.

ಬ್ರೆಜಿಲ್‌ನಲ್ಲಿ ಏರುತ್ತಿರುವ ಸೋಂಕಿತರ ಸಂಖ್ಯೆ

ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಏರಿಕೆ ಕಾಣುತ್ತಿರುವ ಬ್ರೆಜಿಲ್‌ನಲ್ಲಿ 3,950,931 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟಾರೆ ಮೃತರ ಸಂಖ್ಯೆ 1,22,596ಕ್ಕೆ ತಲುಪಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಕೊಲಂಬಿಯಾದಲ್ಲಿ 20 ಸಾವಿರ ದಾಟಿದ ಮೃತರು

ಮಂಗಳವಾರದ ವೇಳೆಗೆ ಕೊಲಂಬಿಯಾದಲ್ಲಿ ಕೋವಿಡ್‌ನಿಂದಾಗಿ ಸಾವಿಗೀಡಾದವರ ಸಂಖ್ಯೆಯು 20,052ಕ್ಕೆ ತಲುಪಿದ್ದು, 6,24,069 ಜನರಿಗೆ ಈವರೆಗೂ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ. 133,155 ಸಕ್ರಿಯ ಪ್ರಕರಣಗಳಿವೆ. ಸುಮಾರು 5 ತಿಂಗಳ ಲಾಕ್‌ಡೌನ್‌ ನಂತರ ಈ ವಾರ ಕೊಲಂಬಿಯಾದಲ್ಲಿ ಕೋವಿಡ್-19 ತಡೆಗೆ ತೆಗೆದುಕೊಂಡಿದ್ದ ಕ್ವಾರಂಟೈನ್ ನಿಯಾಮವಳಿಗಳನ್ನು ಕೊನೆಗೊಳಿಸಿದೆ.

ಕೊರೊನಾ ವೈರಸ್ ಸೋಂಕಿತರ ಪೈಕಿ ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 37,69,523 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 29,01,908 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ 66,333 ಮಂದಿ ಮೃತಪಟ್ಟಿದ್ದಾರೆ.

ರಷ್ಯಾದಲ್ಲಿ 9,97,072, ದಕ್ಷಿಣ ಆಫ್ರಿಕಾದಲ್ಲಿ 6,28,259, ಪೆರುವಿನಲ್ಲಿ 6,57,129, ಚಿಲಿಯಲ್ಲಿ 4,13,145, ಇರಾನ್‌ನಲ್ಲಿ 3,79,894 , ಇಂಗ್ಲೆಂಡ್‌ನಲ್ಲಿ 3,39,415 ಮತ್ತು ಸ್ಪೇನ್‌ನಲ್ಲಿ 4,70,973 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT