ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದಾದ್ಯಂತ 20 ಲಕ್ಷ ದಾಟಿದ ಕೋವಿಡ್–19 ಮೃತರ ಸಂಖ್ಯೆ

Last Updated 16 ಜನವರಿ 2021, 3:33 IST
ಅಕ್ಷರ ಗಾತ್ರ

ವಾಷಿಂಗ್ಟನ್: ಮಹಾಮಾರಿಕೋವಿಡ್–19 ತೊಡೆದು ಹಾಕುವ ನಿಟ್ಟಿನಲ್ಲಿ ವಿಶ್ವದಾದ್ಯಂತ ವೇಗವಾಗಿ ಲಸಿಕೆ ಅಭಿವೃದ್ಧಿಪಡಿಸಿ ಜನರಿಗೆ ವಿತರಣೆ ಆರಂಭಿಸಿರುವ ಈ ಸಂದರ್ಭದಲ್ಲಿ ಕೋವಿಡ್ ಸೋಂಕಿನಿಂದ ಮೃತರ ಸಂಖ್ಯೆ 20 ಲಕ್ಷದಾಟಿದೆ.

ಚೀನಾದ ನಗರ ವುಹಾನ್‌ನಲ್ಲಿ ಕೋವಿಡ್ ಸೋಂಕು ಪತ್ತೆಯಾದ ಒಂದು ವರ್ಷದಲ್ಲಿ ಇಡೀ ಜಗತ್ತನ್ನು ಆವರಿಸಿದ್ದು 20 ಲಕ್ಷ ಜನರನ್ನು ಬಲಿ ಪಡೆದಿದೆ.

ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯವು ಮೃತರ ಕುರಿತಾದ ಅಂಕಿ ಅಂಶಗಳನ್ನು ಸಂಗ್ರಹಿಸಿದ್ದು, ಇದುವರೆಗೆ ಸತ್ತವರ ಸಂಖ್ಯೆ ಬ್ರುಸೆಲ್ಸ್, ಮೆಕ್ಕಾ, ಮಿನ್ಸ್ಕ್ ಅಥವಾ ವಿಯೆನ್ನಾದ ಜನಸಂಖ್ಯೆಗೆ ಸಮನಾಗಿದೆ ಎಂದು ಹೇಳಿದೆ.

ಈ ಮಾಹಿತಿ ಪ್ರಪಂಚದಾದ್ಯಂತದ ಸರ್ಕಾರಿ ಸಂಸ್ಥೆಗಳು ಒದಗಿಸಲಾದ ಅಂಕಿಅಂಶಗಳನ್ನು ಆಧರಿಸಿದ್ದು, ನೈಜ ಸಂಖ್ಯೆಯು ಗಮನಾರ್ಹವಾಗಿ ಹೆಚ್ಚಿದೆ ಎಂದು ನಂಬಲಾಗಿದೆ, ಸೋಂಕಿನ ಆರಂಭಿಕ ದಿನಗಳಲ್ಲಿ ಅಸಮರ್ಪಕ ಪರೀಕ್ಷೆ ಮತ್ತು ಸೂಕ್ತ ಚಿಕಿತ್ಸೆ ಕೊರತೆ ಇತರ ಕಾರಣಗಳಿಂದ ಹಲವು ಸಾವುನೋವುಗಳು ಸಂಭವಿಸಿವೆ.

ಮೊದಲ 8 ತಿಂಗಳಲ್ಲಿ 10ಲಕ್ಷ ಕೋವಿಡ್ ಸೋಂಕಿತರು ಸಾವನ್ನಪ್ಪಿದರೆ, ಬಳಿಕ ನಾಲ್ಕೇ ತಿಂಗಳಲ್ಲಿ 10ಲಕ್ಷ ಸೋಂಕಿತರು ಅಸುನೀಗಿದ್ದಾರೆ.

"ಈ ಭಯಾನಕ ಸಂಖ್ಯೆಯ ಹಿಂದೆ ಮರೆಯಲಾಗದ ಹೆಸರುಗಳು ಮತ್ತು ಮುಖಗಳಿವೆ. ಊಟದ ಮೇಜಿನ ಬಳಿ ಸದಾ ಖಾಲಿ ಇರುವ ಆಸನ, ಪ್ರೀತಿಪಾತ್ರರ ಮೌನದೊಂದಿಗೆ ಪ್ರತಿಧ್ವನಿಸುವ ಕೋಣೆ, ಅವರ ನಗು ಸ್ಮರಣೆಯಾಗಿ ಉಳಿದಿದೆ." ಎಂದು ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.

“ಜಾಗತಿಕ ಸಂಘಟಿತ ಪ್ರಯತ್ನದ ಕೊರತೆಯಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.” ಎಂದು ಅವರು ಹೇಳಿದ್ದಾರೆ. "ವಿಜ್ಞಾನ ಯಶಸ್ವಿಯಾಗಿದೆ, ಆದರೆ ಒಗ್ಗಟ್ಟು ವಿಫಲವಾಗಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT