ಶನಿವಾರ, ಜುಲೈ 31, 2021
25 °C

ಜಗತ್ತಿನಾದ್ಯಂತ 40 ಲಕ್ಷಕ್ಕೂ ಅಧಿಕ ಕೋವಿಡ್‌ ಸಂಬಂಧಿತ ಸಾವುಗಳು: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಜಗತ್ತಿನಾದ್ಯಂತ 40 ಲಕ್ಷಕ್ಕೂ ಅಧಿಕ ಕೋವಿಡ್‌ ಸಂಬಂಧಿತ ಸಾವುಗಳು ಸಂಭವಿಸಿವೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಅಮೆರಿಕ ಮತ್ತು ಬ್ರಿಟನ್‌ ದೇಶಗಳಲ್ಲಿ ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಆದರೆ, ಡೆಲ್ಟಾ ರೂಪಾಂತರವು ಪ್ರಪಂಚದಾದ್ಯಂತ ಪ್ರಬಲವಾಗಿರುವುದರಿಂದ ಹಲವಾರು ರಾಷ್ಟ್ರಗಳು ಲಸಿಕೆ ಕೊರತೆಯನ್ನು ಎದುರಿಸುತ್ತಿವೆ ಎಂದು ರಾಯಿಟರ್ಸ್‌ ವಿಶ್ಲೇಷಿಸಿದೆ.

ಕೋವಿಡ್‌ ಸಂಬಂಧಿತ ಸಾವಿನ ಸಂಖ್ಯೆ 20 ಲಕ್ಷ ತಲುಪಲು ಒಂದು ವರ್ಷ ತೆಗೆದುಕೊಂಡಿತು. ಆದರೆ ಮುಂದಿನ 2೦ ಲಕ್ಷ ಸಾವುಗಳು ಕೇವಲ 166 ದಿನಗಳಲ್ಲಿ ದಾಖಲಾಗಿವೆ.

ಜಗತ್ತಿನ ಒಟ್ಟು ಸಾವಿನ ಪ್ರಮಾಣದಲ್ಲಿ ಶೇ. 50 ಸಾವುಗಳು ಅಮೆರಿಕ, ಬ್ರೆಜಿಲ್‌, ಭಾರತ, ರಷ್ಯಾ ಮತ್ತು ಮೆಕ್ಸಿಕೊ ದೇಶಗಳಲ್ಲಿ ಸಂಭವಿಸಿವೆ.

ರಾಯಿಟರ್ಸ್ ವಿಶ್ಲೇಷಣೆಯ ಪ್ರಕಾರ, ಪ್ರತಿದಿನ ವಿಶ್ವದಾದ್ಯಂತ ವರದಿಯಾಗುವ ಪ್ರತಿ ಮೂರು ಸಾವುಗಳಲ್ಲಿ ಒಂದು ಸಾವು ಭಾರತದಲ್ಲಿ ಸಂಭವಿಸುತ್ತಿದೆ.

ಬಡ ರಾಷ್ಟ್ರಗಳು ಲಸಿಕೆ ಕೊರತೆಯನ್ನು ಎದುರಿಸುತ್ತಿವೆ. ಸಾಂಕ್ರಾಮಿಕವನ್ನು ನಿಯಂತ್ರಿಸಲು ಶ್ರೀಮಂತ ರಾಷ್ಟ್ರಗಳು ಬಡ ರಾಷ್ಟ್ರಗಳಿಗೆ ಹೆಚ್ಚಿನ ದೇಣಿಗೆ ನೀಡಬೇಕೆಂದು ಒತ್ತಾಯಿಸಲಾಗಿದೆ.

ಭಾರತದಲ್ಲಿ ಒಟ್ಟು ಮೃತರ ಸಂಖ್ಯೆ 3,81,903ಕ್ಕೆ ಏರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು