ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಲಸಿಕೆ ಶೇ 90ರಷ್ಟು ಪರಿಣಾಮಕಾರಿ: ಫಿಜರ್‌

Last Updated 9 ನವೆಂಬರ್ 2020, 18:40 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ತಾನು ಅಭಿವೃದ್ಧಿಪಡಿಸಿರುವ ಲಸಿಕೆಯು ಕೋವಿಡ್‌–19 ಅನ್ನು ತಡೆಗಟ್ಟುವಲ್ಲಿ ಶೇ 90ರಷ್ಟು ಪರಿಣಾಮಕಾರಿಯಾಗಿದೆ ಎಂಬುದು ಪ್ರಾಥಮಿಕ ಸಂಶೋಧನೆಯಿಂದ ಸ್ಪಷ್ಟವಾಗಿದೆ ಎಂದು ಫಿಜರ್‌ ಕಂಪನಿಯು ಹೇಳಿದ್ದು, ತುರ್ತು ಸಂದರ್ಭದಲ್ಲಿ ಲಸಿಕೆಯನ್ನು ಮಾನವನ ಮೇಲೆ ಬಳಸಲು ಅವಕಾಶ ನೀಡುವಂತೆ ನಿಯಂತ್ರಣ ಸಂಸ್ಥೆಗೆ ಮಾಸಾಂತ್ಯದೊಳಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂಬ ಸೂಚನೆ ನೀಡಿದೆ.

ಅಮೆರಿಕ ಹಾಗೂ ಇತರ ಐದು ರಾಷ್ಟ್ರಗಳಲ್ಲಿ 44 ಸಾವಿರ ಮಂದಿಯ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗಿದೆ. ಈ ಪ್ರಯೋಗದಲ್ಲಿ ಲಸಿಕೆಯು ಶೇ 90ರಷ್ಟು ಪರಿಣಾಮಕಾರಿ ಎಂಬುದು ತಿಳಿದು ಬಂದಿದೆ. ಇದು ಅಧ್ಯಯನದ ಮಧ್ಯಂತರ ವರದಿ; ಇದನ್ನೇ ಆಧಾರವಾಗಿಟ್ಟು, ಸದ್ಯದಲ್ಲೇ ಲಸಿಕೆ ಲಭ್ಯವಾಗಲಿದೆ ಎಂದು ಭಾವಿಸುವಂತಿಲ್ಲ. ಆರಂಭದಲ್ಲಿ ಕಾಣಿಸಿದ ಫಲಿತಾಂಶವು ಅಧ್ಯಯನ ಪೂರ್ಣಗೊಳ್ಳುವ ವೇಳೆಗೆ ಬದಲಾಗುವ ಸಾಧ್ಯತೆಗಳಿರುತ್ತದೆ ಎಂದು ಸಂಸ್ಥೆ ಹೇಳಿದೆ. ಸಂಸ್ಥೆಯು ಪ್ರಯೋಗಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.

‘ಆರಂಭಿಕ ಫಲಿತಾಂಶದಿಂದ ನಾವು ಉತ್ತೇಜಿತರಾಗಿದ್ದೇವೆ. ಲಸಿಕೆ ಶೀಘ್ರದಲ್ಲೇ ಲಭ್ಯವಾಗಬಹುದು ಎಂಬ ಭರವಸೆಯನ್ನು ನೀಡಬಹುದಾದ ಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಡಾ. ಬಿಲ್‌ ಗ್ರುಬರ್‌ ಹೇಳಿದ್ದಾರೆ. ಆದರೆ, ಈ ವರ್ಷಾಂತ್ಯದ ವೇಳೆಗೆ ಲಸಿಕೆ ಲಭ್ಯವಾಗುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ಅಮೆರಿಕದ ಇನ್ನೊಂದು ಸಂಸ್ಥೆ ಮಾಡರ್ನಾ ಇಂಕ್‌ ಸಹ ‘ಮಾಸಾಂತ್ಯದೊಳಗೆ ಲಸಿಕೆ ಬಳಕೆಗೆ ಅನುಮತಿ ಕೋರಿ ಆಹಾರ ಮತ್ತು ಔಷಧ ಆಡಳಿತಕ್ಕೆ ಅರ್ಜಿಸಲ್ಲಿಸಲಾಗುವುದು’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT