ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update| ಒಂದು ತಿಂಗಳೊಳಗೆ ಲಸಿಕೆ ಸಿದ್ಧವಾಗಬಹುದು: ಟ್ರಂಪ್

Last Updated 16 ಸೆಪ್ಟೆಂಬರ್ 2020, 16:33 IST
ಅಕ್ಷರ ಗಾತ್ರ

ವಾಷಿಂಗ್ಟನ್: ಜಾನ್ ಹಾಪ್ಕಿನ್ಸ್ ಕೊರೊನಾವೈರಸ್ ಸಂಪನ್ಮೂಲಕೇಂದ್ರದ ಅಂಕಿ ಅಂಶಗಳ ಪ್ರಕಾರ ಜಗತ್ತಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2,96,24,865 ಆಗಿದೆ. ಅತೀ ಹೆಚ್ಚು ಸೋಂಕಿತರಿರುವ ಅಮೆರಿಕದಲ್ಲಿ ಪ್ರಕರಣಗಳ ಸಂಖ್ಯೆ 66,00,566 ಕ್ಕೇರಿದೆ. ಇಲ್ಲಿ ಈವರೆಗೆ 19,6,013 ಮಂದಿ ಮೃತಪಟ್ಟಿದ್ದಾರೆ. ಜಗತ್ತಿನಲ್ಲಿ ಕೊರೊನಾ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 93,6313 ಆಗಿದೆ.

ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಸೋಂಕಿತರ ಸಂಖ್ಯೆ 50,20,359 ಆಗಿದೆ. ಈವರೆಗೆ ಮೃತಪಟ್ಟವರು 82,066 ಮಂದಿ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ 43,82,263 ಆಗಿದ್ದು ರಷ್ಯಾದಲ್ಲಿ 10,75,485 ಸೋಂಕಿತರು ಇದ್ದಾರೆ.

ಒಂದು ತಿಂಗಳೊಳಗೆ ಲಸಿಕೆ ಸಿದ್ಧವಾಗಬಹುದು: ಡೊನಾಲ್ಡ್ ಟ್ರಂಪ್
ಕೊರೋನಾವೈರಸ್ ಲಸಿಕೆಗಾಗಿ ಅಮೆರಿಕ ತ್ವರಿತ ಅನುಮೋದನೆ ನೀಡುವ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ ವ್ಯಕ್ತಪಡಿಸಿದ್ದಾರೆ. ನಾಲ್ಕು ವಾರಗಳಲ್ಲಿ ಲಸಿಕೆ ಸಿದ್ಧವಾಗಬಹುದು ಎಂದ ಅವರು ಹಿಂದಿನ ಆಡಳಿತವಾಗಿದ್ದರೆ ಎಫ್‌ಡಿಎ ಮತ್ತು ಎಲ್ಲ ರೀತಿಯ ಅನುಮೋದನೆಗಳನ್ನು ಪಡೆದು ಲಸಿಕೆ ಹೊಂದಲು ವರ್ಷಗೇ ಹಿಡಿಯುತ್ತಿತ್ತು.ನಾವೀಗ ವಾರಗಳ ಅವಧಿಯಲ್ಲಿ ಲಸಿಕೆ ಪಡೆಯಲಿದ್ದೇವೆ.ಮೂರು ಅಥವಾ ನಾಲ್ಕು ವಾರಗಳಲ್ಲಿ ಲಸಿಕೆ ಸಿದ್ಧವಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ಕೋವಿಡ್ -19 ಮುಂಜಾಗ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಿದೆ ಮ್ಯಾಡ್ರಿಡ್
ಸ್ಪೇನ್‌ನಲ್ಲಿ ಅತೀ ಹೆಚ್ಚು ಕೋವಿಡ್ ಸೋಂಕಿತರಿರುವ ಮ್ಯಾಡ್ರಿಡ್‌ನಲ್ಲಿ ಮಂಜಾಗ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮ್ಯಾಡ್ರಿಡ್‌ನಲ್ಲಿ ಸ್ಪೇನ್‌ನ ಸುಮಾರು ಮೂರನೇ ಒಂದು ಭಾಗದಷ್ಟು ಸಕ್ರಿಯ ಕೊರೊನಾವೈರಸ್ ಪ್ರಕರಣಗಳಿವೆ. ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಆದರೆ ಅದು ಸಾಕಾಗುವುದಿಲ್ಲ. ನಾವು ಜವಾಬ್ದಾರರಲ್ಲದಿದ್ದರೆ ಯಾವ ಕೆಲಸವೂ ಆಗಲ್ಲ ಎಂದು ಮ್ಯಾಡ್ರಿಡ್‌ನ ಕೋವಿಡ್ ನಿಯಂತ್ರಣಾ ಮಂಡಳಿಯ ಮುಖ್ಯಸ್ಥ ಆಂಟೋನಿಯೊ ಜಪಾಟೆರೊ ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಕೆಲವೊಂದು ನಡವಳಿಕೆಯನ್ನು ನಮಗೆ ತಡೆಹಿಡಿಯಲು ಆಗುವುದಿಲ್ಲ. ಜನರು ಪಾರ್ಟಿಗಳನ್ನು ಆಯೋಜಿಸುತ್ತಿದ್ದಾರೆ. ಬೀದಿಗಳಲ್ಲಿ ಕುಡಿಯುತ್ತಿದ್ದಾರೆ ಮತ್ತು ಕ್ವಾರಂಟೈನ್ ನಿಯಮವನ್ನು ಪಾಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರವಾಸಿಗರನ್ನು ಸ್ವಾಗತಿಸಿದ ಥಾಯ್ಲೆಂಡ್
ಅಕ್ಟೋಬರ್‌ನಿಂದ ಥಾಯ್ಲೆಂಡ್ ವಿದೇಶಿ ಪ್ರವಾಸಿಗರಿಗೆ ವಿಶೇಷ ವೀಸಾಗಳನ್ನು ನೀಡಲು ಪ್ರಾರಂಭಿಸಲಿದೆ. ಪ್ರಧಾನಿ ಪ್ರಯುತ್ ಚಾನ್-ಓಚಾ ಅವರ ಸಚಿವ ಸಂಪುಟವು ಥಾಯ್ಲೆಂಡ್‌ನಲ್ಲಿ 90 ರಿಂದ 280 ದಿನಗಳವರೆಗೆ ಉಳಿದುಕೊಳ್ಳಲು ಬರುವ ಪ್ರವಾಸಿಗರಿಗೆ ವೀಸಾ ನೀಡುವ ಪ್ರಸ್ತಾಪವನ್ನು ಅನುಮೋದಿಸಿತು. ಹೋಟೆಲ್‌ಗಳು ಅಥವಾ ಆಸ್ಪತ್ರೆಗಳಿಗೆ ಆಗಮಿಸುವಾಗ ಪ್ರವಾಸಿಗರು ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಿಆರೋಗ್ಯ ಮತ್ತು ಸುರಕ್ಷತಾ ನಿಯಮಗಳನ್ನು ಅನುಸರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT