ಭಾನುವಾರ, ಜೂನ್ 20, 2021
25 °C

Covid-19 World Update: ಜಾನ್ಸನ್ ‌& ಜಾನ್ಸನ್‌ನಿಂದ ಮೂರನೇ ಹಂತದ ಲಸಿಕೆ ಪ್ರಯೋಗ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Covid-19 Vaccine

ವಾಷಿಂಗ್ಟನ್: ಕೊರೊನಾ ವೈರಸ್ ಸೋಂಕಿನ ವಿರುದ್ಧ ಜಾನ್ಸನ್ ‌ಆಂಡ್ ಜಾನ್ಸನ್‌ ಅಭಿವೃದ್ಧಿಪಡಿಸಿರುವ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಸಿದ್ಧತೆ ನಡೆದಿದೆ. ಸುಮಾರು 60,000 ಸ್ವಯಂಸೇವಕರು ಪ್ರಯೋಗದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. 

ಸೆಪ್ಟೆಂಬರ್‌ನಲ್ಲಿ ಪ್ರಯೋಗ ಆರಂಭಗೊಳ್ಳುವ ನಿರೀಕ್ಷೆ ಇದೆ. ಅಮೆರಿಕ, ಬ್ರೆಜಿಲ್, ಮೆಕ್ಸಿಕೊ ಸೇರಿದಂತೆ 180 ಕಡೆಗಳಲ್ಲಿ ಪ್ರಯೋಗ ನಡೆಯಲಿದೆ ಎಂದು ವರದಿ ಉಲ್ಲೇಖಿಸಿದೆ.

‘ಮೂರನೇ ಹಂತದ ಪ್ರಯೋಗ ಆದಷ್ಟು ದೃಢವಾಗಿರಬೇಕು ಎಂದು ಉದ್ದೇಶಿಸಲಾಗಿದೆ. ಇದರಲ್ಲಿ ಸುಮಾರು 60,000 ಸ್ವಯಂಸೇವಕರು ಭಾಗಿಯಾಗಲಿದ್ದು, ಹೆಚ್ಚಿನ ಪ್ರಕರಣ ಹೊಂದಿರುವ ಕಡೆಗಳಲ್ಲೇ ನಡೆಸಲಾಗುವುದು. ಮೂರನೇ ಹಂತದ ಪ್ರಯೋಗಕ್ಕೆ ನೇಮಕಾತಿ ಪ್ರಗತಿಯಲ್ಲಿದೆ’ ಎಂದು ಜಾನ್ಸನ್ ‌ಆಂಡ್ ಜಾನ್ಸನ್‌ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: 

ವರ್ಲ್ಡೊಮೀಟರ್ ಅಂಕಿ ಅಂಶ ಪ್ರಕಾರ, ಆಗಸ್ಟ್‌ 21ರ ಬೆಳಗ್ಗೆ ವೇಳೆಗೆ ಜಾಗತಿಕವಾಗಿ 2,28,58,540 ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, 7,97,092 ಜನ ಮೃತಪಟ್ಟಿದ್ದಾರೆ. 1,545,13,944 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಅಮೆರಿಕ 57,46,272 ಸೋಂಕಿತರೊಂದಿಗೆ ಕೋವಿಡ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಈವರೆಗೆ ಅಮೆರಿಕದಲ್ಲಿ 1,77,424 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. 30,95,484 ಜನರು ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿರುವ ಬ್ರೆಜಿಲ್‌‌ನಲ್ಲಿ 35,05,097 ಪ್ರಕರಣಗಳು ಪತ್ತೆಯಾಗಿವೆ. 26,53,407 ಸೋಂಕಿತರು ಗುಣಮುಖರಾಗಿದ್ದು, 1,12,423 ಜನರು ಮೃತಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು