ಸೋಮವಾರ, ಜೂನ್ 21, 2021
21 °C

ದಲೈಲಾಮಾ ಉತ್ತರಾಧಿಕಾರಿ ಆಯ್ಕೆಗೆ ಸರ್ಕಾರದ ಅನುಮೋದನೆ ಅವಶ್ಯಕ: ಚೀನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಿಜೀಂಗ್‌: ಟಿಬೆಟ್‌ನ ಅಧ್ಯಾತ್ಮ ಗುರು ದಲೈಲಾಮಾ ಅವರ ಉತ್ತರಾಧಿಕಾರಿ ಆಯ್ಕೆಗೆ ಚೀನಾದ ಅನುಮೋದನೆ ಬೇಕು. ಈಗಿನ ದಲೈಲಾಮಾ ಮತ್ತು ಅವರ ಸಹಚರರು ಆರಿಸಿದ ಯಾವುದೇ ಉತ್ತರಾಧಿಕಾರಿಗೆ ಮಾನ್ಯತೆ ನೀಡಲಾಗುವುದಿಲ್ಲ ಎಂದು ಚೀನಾ ಶುಕ್ರವಾರ ಹೇಳಿದೆ.

ದಲೈಲಾಮ ಅವರ ಉತ್ತರಾಧಿಕಾರಿ ಆಯ್ಕೆಗೆ ಚೀನಾದ ಕೇಂದ್ರ ಸರ್ಕಾರದ ಅನುಮೋದನೆ ಬೇಕು. ಇದು ಕ್ವಿಂಗ್ ರಾಜವಂಶದ (1644-1911) ಕಾಲದಿಂದ ನಡೆಯುತ್ತಾ ಬಂದಿದೆ ಎಂದು ಚೀನಾ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಶ್ವೇತಪತ್ರದಲ್ಲಿ ಹೇಳಲಾಗಿದೆ.

ಪ್ರಾಚೀನ ಕಾಲದಿಂದಲೂ ಟಿಬೆಟ್ ಚೀನಾದ ಅವಿಭಾಜ್ಯ ಭಾಗ ಎಂದು ಪತ್ರದಲ್ಲಿ ಹೇಳಲಾಗಿದೆ.

1793ರಲ್ಲಿ ಗೂರ್ಖಾ ಆಕ್ರಮಣಕಾರರನ್ನು ಟಿಬೆಟ್‌ನಿಂದ ಹೊರ ಓಡಿಸಲಾಯಿತು. ಈ ವೇಳೆ ಕ್ವಿಂಗ್‌ ಸರ್ಕಾರವು ಟಿಬೆಟ್‌ನ ಉತ್ತಮ ಆಡಳಿತಕ್ಕಾಗಿ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿತು. ಇದರಡಿ ಕೇಂದ್ರ ಸರ್ಕಾರವು ಟಿಬೆಟ್‌ ವ್ಯವಸ್ಥೆಯನ್ನು ನೋಡಿಕೊಳ್ಳಲಿದೆ. ಅದೇ ರೀತಿ ದಲೈಲಾಮ ಅವರ ಉತ್ತರಾಧಿಕಾರಿ ಆಯ್ಕೆಗೂ ಚೀನಾದ ಕೇಂದ್ರ ಸರ್ಕಾರ ಅನುಮೋದನೆ ಪಡೆಯಬೇಕಿದೆ ಎಂದು  ಶ್ವೇತ ಪತ್ರದಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು