ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

85 ದೇಶಗಳಲ್ಲಿ ಕಂಡಿರುವ ಡೆಲ್ಟಾ ಪ್ರಬಲ ವಂಶಾವಳಿಯಾಗುವ ಸಾಧ್ಯತೆ: ಡಬ್ಲ್ಯುಎಚ್‌ಒ

Last Updated 24 ಜೂನ್ 2021, 6:21 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಕೊರೊನಾ ವೈರಸ್‌ನ ರೂಪಾಂತರಿತ ತಳಿಯಾಗಿರುವ ‘ಡೆಲ್ಟಾ’ ಈಗಾಗಲೇ ವಿಶ್ವದ 85 ದೇಶಗಳಲ್ಲಿ ವ್ಯಾಪಿಸಿದ್ದು ಕೋವಿಡ್‌–19ರ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಗಮನಾರ್ಹವಾಗಿ ವಿಸ್ತರಣೆಯಾಗುತ್ತಿರುವ ಇದು ‘ಪ್ರಬಲ ವಂಶಾವಳಿ’ಯಾಗುವ ಸಾಧ್ಯತೆ ಇದ್ದು, ವಿಶ್ವದ ಇನ್ನಷ್ಟು ದೇಶಗಳಲ್ಲಿ ಪತ್ತೆಯಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಜೂನ್ 22 ರಂದು ಬಿಡುಗಡೆ ಮಾಡಿದ ಕೋವಿಡ್‌–19ರ ವರದಿ ಪ್ರಕಾರ, ಜಾಗತಿಕವಾಗಿ 170 ದೇಶಗಳಲ್ಲಿ ಆಲ್ಫಾ, 119 ದೇಶಗಳಲ್ಲಿ ಬೀಟಾ, 71 ದೇಶಗಳಲ್ಲಿ ಗಾಮಾ ಹಾಗೂ 85 ದೇಶಗಳಲ್ಲಿ ಡೆಲ್ಟಾ ರೂಪಾಂತರಿತ ತಳಿಗಳು ಪತ್ತೆಯಾಗಿವೆ.

ಪ್ರಸ್ತುತ ಡೆಲ್ಟಾ ತಳಿಯು ವೇಗವಾಗಿ ಪಸರಿಸುತ್ತಿದ್ದು, ಕಳೆದ ಎರಡು ವಾರಗಳಲ್ಲಿ 11 ದೇಶಗಳಲ್ಲಿ ಹೊಸದಾಗಿ ಪತ್ತೆಯಾಗಿವೆ. ಅಲ್ಲದೆ ಇನ್ನಷ್ಟು ದೇಶಗಳಲ್ಲಿ ಅದು ವ್ಯಾಪಿಸುವ ಸಾಧ್ಯತೆಯೂ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾ ರೂಪಾಂತರಿತ ತಳಿಗಳ ಹರಡುವಿಕೆಗೆ ಸಂಬಂಧಿಸಿದಂತೆ ನಿಕಟವಾಗಿ ಮೇಲ್ವಿಚಾರಣೆ ವಹಿಸಲಾಗುತ್ತಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

ಡೆಲ್ಟಾ ರೂಪಾಂತರಿಯು ಆಲ್ಫಾ ತಳಿಗಿಂತಲೂ ವ್ಯಾಪಕವಾಗಿ ಹರಡಬಲ್ಲುದು. ಈಗಿನ ಸ್ಥಿತಿಯೇ ಮುಂದುವರಿದರೆ ಡೆಲ್ಟಾ ‘ಪ್ರಬಲ ವಂಶಾವಳಿ’ಯಾಗುವ ನಿರೀಕ್ಷೆ ಇದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT