ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಣಭೇದ ವಿರೋಧಿ ಹೋರಾಟಗಾರ ಡೆಸ್ಮಂಡ್‌ ಟೂಟೂ ನಿಧನ

Last Updated 26 ಡಿಸೆಂಬರ್ 2021, 16:40 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರುದ್ಧ ಅಹಿಂಸಾ ಮಾರ್ಗದ ಹೋರಾಟ ಗಾರಹಾಗೂ ನೊಬೆಲ್‌ ಶಾಂತಿ
ಪ್ರಶಸ್ತಿ ಪುರಸ್ಕೃತ, ನಿವೃತ್ತ ಆರ್ಚ್‌ಬಿಷಪ್‌ ಡೆಸ್ಮಂಡ್‌ ಟೂಟೂ (90) ಅವರು ಭಾನುವಾರ ನಿಧನರಾದರು.

ಜೊಹಾನ್ಸ್‌ಬರ್ಗ್‌ನ ಮೊದಲ ಕಪ್ಪು ವರ್ಣೀಯ ಬಿಷಪ್‌ ಆದ ಟೂಟೂ ಅವರು, ಬಳಿಕ ಕೇಪ್‌ಟೌನ್‌ನ ಆರ್ಚ್‌ಬಿಷಪ್‌ ಆದರು. ದೇಶದಲ್ಲಿ ಮತ್ತು ಜಾಗತಿಕವಾಗಿ ಜನಾಂಗೀಯ ಅಸಮಾನತೆ ವಿರುದ್ಧ ಧ್ವನಿ ಎತ್ತಿದ್ದ ಅವರು, ಈ ಸಂಬಂಧ ಮೊನಚಿನ ಮಾತುಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು.

ಮೋದಿ ಕಂಬನಿ: ಟೂಟೂ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ‘ಜಾಗತಿಕ ವಾಗಿ ಅಸಂಖ್ಯಾತ ಜನರಿಗೆ ಮಾರ್ಗ ದರ್ಶಕರಾಗಿದ್ದ, ಮಾನವನ ಘನತೆ ಮತ್ತು ಸಮಾನತೆಗಾಗಿ ಒತ್ತು ನೀಡಿದ ಮಹಾನ್‌ ವ್ಯಕ್ತಿಯ ಸಾಧನೆ ಶಾಶ್ವತವಾಗಿ ಸ್ಮರಣೀಯವಾಗಿರುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT