ಬುಧವಾರ, ಅಕ್ಟೋಬರ್ 21, 2020
26 °C

ನಾನು ಆರೋಗ್ಯವಾಗಿದ್ದೇನೆ, ಆತಂಕ ಬೇಡ: ಡೊನಾಲ್ಡ್ ಟ್ರಂಪ್‌

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ನಾನು ಆರೋಗ್ಯವಾಗಿದ್ದೇನೆ ಆತಂಕಪಡುವ ಅಗತ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌  ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ಅವರ ಪತ್ನಿಗೆ ಕೋವಿಡ್‌–19 ಇರುವುದು ಗುರುವಾರ ರಾತ್ರಿ ದೃಢಪಟ್ಟಿತ್ತು. ಅವರು ಶುಕ್ರವಾರ ಸಂಜೆ ಇಲ್ಲಿನ ವಾಲ್ಟರ್‌ ರೀಡ್‌ ಮಿಲಿಟರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಟ್ರಂಪ್‌ ದಂಪತಿಗೆ ಕೋವಿಡ್‌ನ ಪ್ರಾಯೋಗಿಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

ಆಸ್ಪತ್ರೆಗೆ ತೆರಳುವ ಮುನ್ನ ಶ್ವೇತಭವನದಲ್ಲಿ 18 ಸೆಕೆಂಡ್‌ಗಳ ವಿಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ. ಅಭಿಮಾನಿಗಳು, ಬೆಂಬಲಿಗರು ಸೇರಿದಂತೆ ದೇಶವಾಸಿಗಳಿಗೆ ಧನ್ಯವಾದಗಳನ್ನ ಹೇಳಿದ್ದಾರೆ.

ವಿಡಿಯೊ ಹೇಳಿಕೆಗೂ ಕೊರೊನಾ ಸೋಂಕು ದೃಢವಾದ ಬಗ್ಗೆ ಟ್ರಂಪ್‌ ಟ್ವೀಟ್‌ ಮಾಡಿದ್ದರು. 'ಮೆಲಾನಿಯಾ ಟ್ರಂಪ್‌ ಮತ್ತು ನನಗೆ ಕೋವಿಡ್‌–19 ಪಾಸಿಟಿವ್ ಇರುವುದು ಇಂದು ರಾತ್ರಿ ದೃಢಪಟ್ಟಿದೆ. ನಾವು ನಮ್ಮ ಕ್ವಾರಂಟೈನ್‌ ಹಾಗೂ ಗುಣಮುಖರಾಗುವ ಪ್ರಕ್ರಿಯೆ ತಕ್ಷಣವೇ ಆರಂಭಿಸಲಿದ್ದೇವೆ. ನಾವು ಒಟ್ಟಿಗೆ ಇದರಲ್ಲಿ ಸಾಗೋಣ' ಎಂದು ಟ್ರಂಪ್‌ ಟ್ವೀಟಿಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್‌ 3ರಂದು ನಿಗದಿಯಾಗಿದೆ. ಚುನಾವಣೆ ಪ್ರಚಾರದ ಕಾವು ಏರುತ್ತಿರುವ ಸಮಯದಲ್ಲೇ ಟ್ರಂಪ್‌ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ.

ಪ್ರಧಾನಿ ಮೋದಿ ಸೇರಿದಂತೆ ವಿಶ್ವದ ಹಲವಾರ ಗಣ್ಯರು ಶೀಘ್ರ ಗುಣುಮುಖರಾಗುವಂತೆ ಕೋರಿದ್ದಾರೆ.  'ನನ್ನ ಸ್ನೇಹಿತ ಡೊನಾಲ್ಡ್ ಟ್ರಂಪ್‌ ಮತ್ತು ಮೆಲಾನಿಯಾ ಆದಷ್ಟು ಬೇಗೆ ಗುಣಮುಖರಾಗಿ ಮತ್ತು ಉತ್ತಮ ಆರೋಗ್ಯ ನಿಮ್ಮದಾಗುವಂತೆ ಕೋರುವೆ' ಎಂದು ಮೋದಿ ಟ್ವೀಟಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು