ಬುಧವಾರ, ಅಕ್ಟೋಬರ್ 28, 2020
18 °C

ರಷ್ಯಾ, ಚೀನಾದಿಂದ ಬೈಡನ್‌ ಪುತ್ರನಿಗೆ ಹಣ ಸಂದಾಯ: ಡೊನಾಲ್ಡ್‌ ಟ್ರಂಪ್‌ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ‘ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಅವರ ಮಗ ಹಂಟರ್‌, ರಷ್ಯಾ ಮತ್ತು ಚೀನಾದಿಂದ ಭಾರಿ ಮೊತ್ತದ ಹಣ ಪಡೆದಿದ್ದಾರೆ’ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದಾರೆ. ಮಾಧ್ಯಮಗಳಿಗೂ ಈ ವಿಷಯ ಗೊತ್ತು. ಆದರೆ, ಅವು ಸಹ ಈ ಬಗ್ಗೆ ಮೌನ ವಹಿಸಿವೆ ಎಂದು ದೂರಿದ್ದಾರೆ.

‘ಈ ಎರಡು ದೇಶಗಳಿಂದ ಹಂಟರ್‌ ಹಣ ಪಡೆದಿದ್ದಾರೆ ಎಂಬುದನ್ನು ನಂಬಲು ಆಗುವುದಿಲ್ಲ. ಮಾಸ್ಕೊ ಮೇಯರ್ ಪತ್ನಿ 3.5 ದಶಲಕ್ಷ ಡಾಲರ್‌ (₹ 25 ಕೋಟಿ) ನೀಡಿದ್ದಾರೆ. ಈ ಬಗ್ಗೆ ಯಾರೂ ಪ್ರಶ್ನೆ ಮಾಡುತ್ತಿಲ್ಲ’ ಎಂದು ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್‌ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಹೇಳಿದರು.

ಇದನ್ನೂ ಓದಿ: 

ಕಳೆದ ವಾರ ರಿಪಬ್ಲಿಕನ್‌ ಸಂಸದರೊಬ್ಬರು ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ‘ಬೈಡನ್‌ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಾಸ್ಕೊದ ಮಾಜಿ ಮೇಯರ್ ಯುರಿ ಲಜಕೋವ್‌ ಪತ್ನಿ ಎಲೆನಾ ಬಟೂರಿನಾ ಅವರಿಂದ ಹಂಟರ್ 3.5 ದಶಲಕ್ಷ ಡಾಲರ್‌ ಪಡೆದಿದ್ದರು’ ಎಂದು ಆರೋಪಿಸಿದ್ದರು.  

‘ನಿಷ್ಪಕ್ಷಪಾತವಾಗಿ ವರದಿ ಮಾಡುವ ಮಾಧ್ಯಮ ಇದ್ದಿದ್ದರೆ, ಈ ವಿಷಯ ಕುರಿತು ವರ್ಷಗಟ್ಟಲೇ ವಿಸ್ತೃತ ವರದಿಗಳನ್ನು ಪ್ರಕಟಿಸುತ್ತಿದ್ದವು. ಅಂಥ ವರದಿ ಪ್ರಕಟಿಸಿದ್ದರೆ ನಿಮಗೆ ಪುಲಿಟ್ಜರ್‌ ಪ್ರಶಸ್ತಿಯೂ ಸಿಗುತ್ತಿತ್ತು’ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು