ಸೋಮವಾರ, ನವೆಂಬರ್ 30, 2020
26 °C

‘ಟ್ರಂಪ್ ಸೋಲು ಒಪ್ಪಿಕೊಳ್ಳುವುದಿಲ್ಲ’

ಎಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಸೋತಿದ್ದರೂ, ಅವರು ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಅವರ ಆಪ್ತರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ತಮ್ಮ ಅವಧಿ ಮುಗಿಯುವ ವೇಳೆಗೆ ಟ್ರಂಪ್ ಅವರು ಶ್ವೇತಭವನವನ್ನು ತೊರೆಯಬೇಕಾಗುತ್ತದೆ. ಅಧಿಕಾರ ಹಸ್ತಾಂತರವನ್ನು ಸೋಲು ಎಂಬಂತೆ ಬಿಂಬಿಸಿಕೊಳ್ಳದೇ ಇರಲು ಟ್ರಂಪ್ ಅವರು ಮುಂದಾಗುತ್ತಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ.

ಮತಎಣಿಕೆ ನಡೆಯುತ್ತಿರುವ ವೇಳೆಯಲ್ಲೇ ಟ್ರಂಪ್ ಅವರು, ‘ವಂಚನೆ ನಡೆಯುತ್ತಿದೆ. ಅವಧಿ ಮುಗಿದ ಮೇಲೆ ಬಂದ ಇ-ಮೇಲ್ ಮತಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದ್ದರು. ಟ್ರಂಪ್ ಮತ್ತು ಅವರ ಬೆಂಬಲಿಗರು ಈಗಲೂ ಇದೇ ಕಾರಣವನ್ನು ಮುಂದಿಟ್ಟುಕೊಂಡು ಫಲಿತಾಂಶವನ್ನು ವಿರೋಧಿಸುತ್ತಿದ್ದು, ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.

ಮತಎಣಿಕೆಯಲ್ಲಿ ವಂಚನೆ ಎಸಗಿದ್ದರಿಂದಲೇ ತಾವು ಸೋತಿದ್ದು ಎಂದು ಬಿಂಬಿಸಲು ಟ್ರಂಪ್ ಅವರು ಯತ್ನಿಸುತ್ತಿದ್ದಾರೆ. ಇದನ್ನು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಟ್ರಂಪ್ ಅವರ ಬೆಂಬಲಿಗರೂ ಇದನ್ನು ನಂಬಿದ್ದಾರೆ. ಹೀಗಾಗಿಯೇ ಟ್ರಂಪ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಟ್ರಂಪ್ ಅವರ ಮುಂದಿನ ನಡೆ ಏನೇ ಆಗಿದ್ದರೂ, ಬೆಂಬಲಿಗರ ಬೆಂಬಲವನ್ನು ಕಾಪಾಡಿಕೊಳ್ಳಲು ಇದು ಮುಖ್ಯವಾಗುತ್ತದೆ ಎಂದು ಆಪ್ತರು ಹೇಳಿದ್ದಾರೆ.

‘ಟ್ರಂಪ್ ಅವರು ಸೋಲಲು ಬಯಸುವುದಿಲ್ಲ, ಅವರು ಹೋರಾಡುವುದನ್ನು ಬಯಸುತ್ತಾರೆ’ ಎಂದು ಟ್ರಂಪ್ ಅವರ ಆರ್ಥಿಕ ಸಲಹೆಗಾರ ಲ್ಯಾರಿ ಕುಡ್ಲೊ ಹೇಳಿದ್ದಾರೆ.

‘ಬೈಡನ್ ಈಗ ಗೆದ್ದಿದ್ದಾರೆ. ಆದರೆ, ಬೈಡನ್ ಅವರು ಅಕ್ರಮವಾಗಿ ಗೆದ್ದಿದ್ದಾರೆ ಎಂದು ದೇಶದ ಅರ್ಧದಷ್ಟು ಜನರು ನಂಬುತ್ತಾರೆ’ ಎಂದು ಟ್ರಂಪ್ ಅವರ ಆಪ್ತ ಸ್ನೇಹಿತ ರೋಗರ್ ಸ್ಟೋನ್ ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು