ಬುಧವಾರ, ಜನವರಿ 27, 2021
20 °C

‘ನಮ್ಮನ್ಯಾರೂ ತಡೆಯಲಾಗದು’ಎಂದಿದ್ದ ಟ್ರಂಪ್ ಬೆಂಬಲಿಗ ಮಹಿಳೆ ಗುಂಡೇಟಿಗೆ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೊಂದಾದ ಅಮೆರಿಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ತಲೆ ತಗ್ಗಿಸುವಂತಾ ಘಟನೆ ನಡೆದಿದೆ. ಡೊನಾಲ್ಡ್ ಟ್ರಂಪ್ ಸೋಲನ್ನು ಒಪ್ಪಿಕೊಳ್ಳದ ಬೆಂಬಲಿಗರು ಕ್ಯಾಪಿಟಲ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಘಟನೆಯಲ್ಲಿ ನಾಲ್ವರು ಗುಂಡೇಟಿಗೆ ಬಲಿಯಾಗಿದ್ದು, ಅದರಲ್ಲಿ ಡೊನಾಲ್ಡ್ ಟ್ರಂಪ್ ಅವರ ಕಟ್ಟಾ ಬೆಂಬಲಿಗ ಮಹಿಳೆಯೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಹೌದು, ಅಮೆರಿಕದ ಏರ್‌ಫೋರ್ಸ್‌ನಲ್ಲಿ 14 ವರ್ಷ ಪೂರೈಸಿರುವ ಹಿರಿಯ ಅಧಿಕಾರಿ ಆಶ್ಲಿ ಬಬ್ಬಿಟ್ ಮೃತಪಟ್ಟಿದ್ದಾರೆ ಎಂದು ಸ್ಯಾನ್ ಡಿಯಾಗೊ ಟಿವಿ ವರದಿ ಮಾಡಿದೆ. ಈ ಮಹಿಳೆ ಸ್ಯಾನ್ ಡಿಯಾಗೊ ಮೂಲದವಳಾಗಿದ್ದು, ಡೊನಾಲ್ಡ್ ಟ್ರಂಪ್ ಅವರ ಕಟ್ಟಾ ಬೆಂಬಲಿಗಳು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಮಹಿಳೆ ಸಾವನ್ನು ಖಚಿತಪಡಿಸಿರುವ ವಾಷಿಂಗ್ಟನ್ ಪೊಲೀಸರು ಸತ್ತವರ ಗುರುತು ಪತ್ತೆ ಅಥವಾ ಶೂಟಿಂಗ್ ಸಂದರ್ಭಗಳ ಬಗ್ಗೆ ವಿವರಗಳನ್ನು ನೀಡಿಲ್ಲ, ಸದ್ಯ, ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದೆ. ಗುಂಡೇಟು ಬೀಳುವುದಕ್ಕೂ ಮುನ್ನ ಮಹಿಳೆ, ನಮ್ಮನ್ನು ಯಾರೂ ತಡೆಯಲಾಗದು ಎಂದು ಟ್ವೀಟ್ ಮಾಡಿದ್ದರು ಎಂದು ವರದಿಯಾಗಿದೆ.

ಕ್ಯಾಪಿಟಲ್ ಕಟ್ಟಡದೊಳಗೆ ದಾಂಧಲೆ ಮತ್ತು ಹಿಂಸಾತ್ಮಕ ಪರಿಸ್ಥಿತಿ ನಿರ್ಮಾಣವಾದಾಗ ಪ್ರತಿಭಟನಾಕಾರರು ಒಳಗೆ ಹೋಗದಂತೆ ತಡೆಯಲು ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ ಸಂದರ್ಭ ಈ ಮಹಿಳೆಗೆ ಗುಂಡೇಟು ಬಿದ್ದಿದೆ. ಗಾಯಗೊಂಡ ಕೆಲವೇ ಕ್ಷಣಗಳಲ್ಲಿ ಮಹಿಳೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು