ಸೋಮವಾರ, ಅಕ್ಟೋಬರ್ 18, 2021
22 °C

ಎಬೋಲಾವನ್ನು ಸೋಲಿಸಲಾಗಿದೆ: ಕಾಂಗೊ ಪ್ರಾಧ್ಯಾಪಕ ಜೀನ್‌–ಜಾಕ್ವೆಸ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕಿನ್ಶಾಸಾ: ‘ಎಬೋಲಾವನ್ನು ಸೋಲಿಸಲಾಗಿದೆ. ಈ ಮಾರಣಾಂತಿಕ ಸೋಂಕನ್ನು ಲಸಿಕೆಗಳು ಮತ್ತು ವೈದ್ಯಕೀಯ ಚಿಕಿತ್ಸೆ ಮೂಲಕ ನಿಯಂತ್ರಣಕ್ಕೆ ತರಲಾಗಿದೆ’ ಎಂದು 40 ವರ್ಷಗಳ ಹಿಂದೆ ಎಬೋಲಾ ವೈರಾಣುವನ್ನು ಮೊದಲು ಪತ್ತೆ ಹಚ್ಚಿದ ಕಾಂಗೊ ಪ್ರಾಧ್ಯಾಪಕ ಜೀನ್‌–ಜಾಕ್ವೆಸ್ ಮುಯೆಂಬೆ ಹೇಳಿದರು.

‘ಎಬಂಗಾ’ ಚಿಕಿತ್ಸೆಯು ಮಾರುಕಟ್ಟೆಗೆ ಆಗಮಿಸಿದ್ದು, ಈ ಹಿನ್ನೆಲೆಯಲ್ಲಿ ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೊದ ರಾಜಧಾನಿ ಕಿನ್ಶಾಸಾದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಜೀನ್‌–ಜಾಕ್ವೆಸ್‌ ಮಾತನಾಡಿದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಮೆರಿಕದ ಆಹಾರ ಮತ್ತು ಔಷಧಿ ಆಡಳಿತವು ಎಬಂಗಾ ಚಿಕಿತ್ಸೆಗೆ ಅನುಮೋದನೆ ನೀಡಿತ್ತು.

‘ಕಳೆದ 40 ವರ್ಷಗಳಿಂದ ನಾನು ಈ ಮಾರಣಾಂತಿಕ ಮತ್ತು ಭಯಾನಕ ರೋಗದ ವಿರುದ್ಧದ ಹೋರಾಟಕ್ಕೆ ಸಾಕ್ಷಿಯಾಗಿದ್ದೇನೆ. ಸದ್ಯ ಈ ಸೋಂಕನ್ನು ಸೋಲಿಸಲಾಗಿದೆ. ಇದನ್ನು ತಡೆಯಬಹುದು ಮತ್ತು ಗುಣಪಡಿಸಬಹುದು ಎಂಬುದನ್ನು ನಾನು ಹೇಳಬಲ್ಲೆ’ ಎಂದು ಅವರು ತಿಳಿಸಿದರು.

‘ಎಬಂಗಾ’ವು ಎಬೋಲಾ ವೈರಾಣು ಜೀವಕೋಶವನ್ನು ಪ್ರವೇಶಿಸದಂತೆ ತಡೆಯುತ್ತದೆ ಮತ್ತು ಪ್ರಾಣ ಅಪಾಯವನ್ನು ಕಡಿಮೆಗೊಳಿಸುತ್ತದೆ. ಈ ವೈರಾಣುವಿನ ಬಗ್ಗೆ ಅಮೆರಿಕದಲ್ಲಿ ಮುಯೆಂಬೆ ಅವರೊಂದಿಗೆ ಸೇರಿ ಸಂಶೋಧನೆ ನಡೆಸಲಾಗುತ್ತಿದೆ’ ಎಂದು ಅಮೆರಿಕದ ಜೀವಶಾಸ್ತ್ರಜ್ಞೆ ನಾನ್ಸಿ ಸುಲ್ಲಿವಾನ್‌ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು