ಗುರುವಾರ , ಜನವರಿ 28, 2021
27 °C

ಚುನಾವಣೆ ಮುಗಿದಿದೆ...: ಟ್ರಂಪ್‌ ಅಧಿಕಾರ ಹಸ್ತಾಂತರದ ಭರವಸೆ ನಂತರ ಬೈಡನ್‌ ಹೇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: 'ಅಮೆರಿಕ ಚುನಾವಣೆ ಮುಗಿದಿದೆ. ಪಕ್ಷಪಾತ ಮತ್ತು ಪರಸ್ಪರರನ್ನು ದುಷ್ಟರೆಂದು ಬಿಂಬಿಸಿಕೊಳ್ಳುವಂಥ ಮಾತುಗಳನ್ನು ಬದಿಗಿಡಲು ಇದು ಸಕಾಲ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಮಂಗಳವಾರ ಹೇಳಿದ್ದಾರೆ.

ಚುನಾವಣೆ ಸೋಲಿನ ನಂತರವೂ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಮಂಗಳವಾರ ತಮ್ಮ ನಿಲುವು ಬದಲಿಸಿದ್ದಾರೆ. ತಾವು ಅಧಿಕಾರ ಹಸ್ತಾಂತರಕ್ಕೆ ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಅಧಿಕಾರ ಹಸ್ತಾಂತರದ ಮೇಲ್ವಿಚಾರಣೆಯ ಏಜೆನ್ಸಿಯಾದ 'ಜನರಲ್ ಸರ್ವೀಸಸ್ ಅಡ್ಮಿನಿಸ್ಟ್ರೇಷನ್ (ಜಿಎಸ್ಎ)' ಈಗ ಡೆಮೋಕ್ರಾಟ್ ಪಕ್ಷದ ಬಿಡೆನ್ ಅವರನ್ನು ನವೆಂಬರ್ 3 ರ ಚುನಾವಣೆಯ 'ಸ್ಪಷ್ಟ ವಿಜೇತ' ಎಂದು ಘೋಷಿಸಿದೆ.

'ಚುನಾವಣೆ ಮುಗಿದಿದೆ. ಪಕ್ಷಪಾತ ಮತ್ತು ಪರಸ್ಪರರನ್ನು ದುಷ್ಟರೆಂದು ಬಿಂಬಿಸಿಕೊಳ್ಳುವಂಥ ಮಾತುಗಳನ್ನು ನಾವು ಬದಿಗಿಡಬೇಕಿದೆ. ನಾವು ಒಗ್ಗೂಡಬೇಕಾಗಿದೆ' ಎಂದು ಬಿಡೆನ್ ಟ್ವೀಟ್ ಮಾಡಿದ್ದಾರೆ.

'ದೇಶದ ರಾಜ್ಯಗಳನ್ನು ಕೆಂಪು, ನೀಲಿ (ಡೆಮಕ್ರಟಿಕ್‌ ಪಕ್ಷ ಗೆದ್ದ ರಾಜ್ಯಗಳನ್ನು ನೀಲಿ ಬಣ್ಣದಿಂದಲೂ, ರಿಪಬ್ಲಿಕ್‌ ಪಕ್ಷ ಗೆದ್ದ ರಾಜ್ಯಗಳನ್ನು ಕೆಂಪು ಬಣ್ಣದಿಂದಲೂ ಗುರುತಿಸಲಾಗುತ್ತದೆ) ನೋಡದೇ, ಅಮೆರಿಕದ ರಾಜ್ಯಗಳು ಎಂದು ನೋಡುವ, ದೇಶವನ್ನು ವಿಭಜನೆ ಮಾಡದೆ, ಐಕ್ಯತೆ ಬಯಸುವ ಅಧ್ಯಕ್ಷನಾಗುತ್ತೇನೆ,' ಎಂದು ಬೈಡನ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು