ಶನಿವಾರ, ಮೇ 28, 2022
22 °C

ಕ್ಯಾಮರೂನ್: ವಿಮಾನ ಪತನ– 11 ಮಂದಿ ಸಾವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಯಾವುಂದೆ, ಕ್ಯಾಮರೂನ್: ಹನ್ನೊಂದು ಜನರಿದ್ದ ಖಾಸಗಿ ವಿಮಾನವೊಂದು ಕ್ಯಾಮರೂನ್‌ನ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

ನೆರೆಯ ಚಾಡ್‌ನಲ್ಲಿ ಹೈಡ್ರೊಕಾರ್ಬನ್‌ ಪೈಪ್‌ಲೈನ್‌ನ ನಿರ್ವಹಣೆ ಮಾಡುತ್ತಿರುವ ಕ್ಯಾಮರೂನ್ ಆಯಿಲ್‌ ಟ್ರಾನ್ಸ್‌ಪೋರ್ಟೇಷನ್‌ ಕಂಪನಿಯು ಈ ವಿಮಾನವನ್ನು ಬಾಡಿಗೆಗೆ ಪಡೆದಿತ್ತು.

ವಿಮಾನವು ಯಾವುಂದೆಯ ಎನ್‌ಸಿಮಾಲೆನ್ ವಿಮಾನ ನಿಲ್ದಾಣದಿಂದ ದೇಶದ ಪೂರ್ವದಲ್ಲಿರುವ ಬೆಲಾಬೊಗೆ ತೆರಳುತ್ತಿದ್ದಾಗ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು