ಸೋಮವಾರ, ಅಕ್ಟೋಬರ್ 26, 2020
21 °C
ವಸತಿ ಪ್ರದೇಶಗಳಲ್ಲಿ ಆತಂಕ

ಲಾಸ್‌ಏಂಜಲೀಸ್‌: ಪರ್ವತ, ಮರುಭೂಮಿಯತ್ತ ಕಾಳ್ಗಿಚ್ಚು

ಎಪಿ Updated:

ಅಕ್ಷರ ಗಾತ್ರ : | |

Prajavani

ಲಾಸ್‌ಏಂಜಲೀಸ್‌ ‌: ಕ್ಯಾಲಿಫೊರ್ನಿಯಾದಲ್ಲಿ ಉಂಟಾಗಿರುವ ಅಗಾಧ ಕಾಳ್ಗಿಚ್ಚು ಸೋಮವಾರ ಲಾಸ್‌ಏಂಜಲೀಸ್‌ನ ಈಶಾನ್ಯ ಪರ್ವತಗಳು ಮತ್ತು ಮೊಜಾವೆ ಮರುಭೂಮಿಗೂ ವಿಸ್ತರಿಸಿಕೊಂಡು, ವಸತಿ ಪ್ರದೇಶಗಳ ನಿವಾಸಿಗಳಲ್ಲಿ ಆತಂಕ ಉಂಟುಮಾಡಿದೆ.

’ಕ್ಯಾಲಿಪೊರ್ನಿಯಾದಲ್ಲಿ ಸಂಭವಿಸಿರುವ ಐದು ಕಾಳ್ಗಿಚ್ಚು ಪ್ರಕರಣಗಳಿಂದಾಗಿ 14,500 ಚದುರ ಕಿಲೋಮೀಟರ್ ವ್ಯಾಪ್ತಿ ಪ್ರದೇಶ ನಾಶವಾಗಿದೆ. ಇದು ಕನೆಕ್ಟಿಕಟ್ ರಾಜ್ಯಕ್ಕಿಂತ ಬಹುದೊಡ್ಡ ಪ್ರದೇಶವಾಗಿದೆ’ ಗೌವ್‌ಗವಿನ್‌ ನ್ಯೂಸಮ್‌ ವರದಿ ಮಾಡಿದೆ.

ಕಾಳ್ಗಿಚ್ಚು ಹಬ್ಬುತ್ತಿರುವ ಈಶಾನ್ಯ ಪರ್ವತಗಳ ತಪ್ಪಲು ಮತ್ತು ಮರುಭೂಮಿಯ ಆಸುಪಾಸಿನಲ್ಲಿರುವ ನಿವಾಸಿಗಳಿಗೆ ’ಎಚ್ಚರಿಕೆಯ ಆದೇಶ’ ನೀಡಲಾಗಿದೆ. ರಾಜ್ಯದಾದ್ಯಂತ ಕನಿಷ್ಠ 23,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ನ್ಯೂಸಮ್ ವರದಿಯಲ್ಲಿ ಉಲ್ಲೇಖಿಸಿದೆ.

ಲಾಸ್‌ಏಂಜಲೀಸ್‌ನಲ್ಲಿ ಸಂಭವಿಸಿದ  ಕಾಳ್ಗಿಚ್ಚು ಸುಮಾರು ಎರಡು ವಾರಗಳ ಕಾಲ, 427 ಚ. ಕಿ.ಮೀ ಪ್ರದೇಶವನ್ನು ನಾಶಪಡಿಸಿತ್ತು. ಕಾಳ್ಗಿಚ್ಚಿನಿಂದ ಯಾವುದೇ ಸಾವುನೋವಿನ ಪ್ರಕರಣಗಳು ವರದಿಯಾಗಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು