ಮಂಗಳವಾರ, ಮಾರ್ಚ್ 28, 2023
23 °C

ಪ್ರಕೃತಿಯನ್ನು ಶೌಚಾಲಯವೆಂದು ಪರಿಗಣಿಸಿದ್ದು ಸಾಕು: ಆಂಟೋನಿಯೊ ಗುಟೆರೆಸ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಗ್ಲಾಸ್ಗೋ: 'ಪ್ರಕೃತಿಯನ್ನು ಶೌಚಾಲಯವೆಂದು ಪರಿಗಣಿಸುವುದನ್ನು ನಿಲ್ಲಿಸೋಣ,‘ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸೋಮವಾರ ವಿಶ್ವ ಸಮುದಾಯವನ್ನು ಒತ್ತಾಯಿಸಿದ್ದಾರೆ.

ಗ್ಲಾಸ್ಗೋದಲ್ಲಿ ನಡೆಯುತ್ತಿರುವ ‘ವಿಶ್ವಸಂಸ್ಥೆಯ 26 ನೇ ಹವಾಮಾನ ಬದಲಾವಣೆ ಸಮ್ಮೇಳನ–(ಸಿಒಪಿ–26)’ದಲ್ಲಿ ಅವರು ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಿದರು.

‘ಜೀವ ವೈವಿಧ್ಯದ ಮೇಲೆ ಕ್ರೌರ್ಯ ಮರೆಯುವುದು ಸಾಕು, ಇಂಗಾಲದಿಂದ ನಮ್ಮನ್ನು ಕೊಂದುಕೊಂಡಿದ್ದು ಸಾಕು, ಪ್ರಕೃತಿಯನ್ನು ಶೌಚಾಲಯದಂತೆ ಪರಿಗಣಿಸಿದ್ದು ಸಾಕು, ನಮ್ಮ ದಾರಿಯನ್ನು ನಾವೇ ಸುಡುವುದು, ಅಗೆಯುವುದು ಮತ್ತು ಗಣಿಗಾರಿಕೆ ಮಾಡುವುದು ಸಾಕು. ನಾವು ನಮ್ಮ ಸಮಾಧಿಯನ್ನು ನಾವೇ ಅಗೆಯುತ್ತಿದ್ದೇವೆ,’ ಎಂದು ಅವರು ತಮ್ಮ ಭಾಷಣದಲ್ಲಿ ಬೇಸರ ವ್ಯಕ್ತಪಡಿಸಿದರು.

ಇದೇ ಸಮ್ಮೇಳನದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೂ ಭಾಗವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು