ಭಾನುವಾರ, ಅಕ್ಟೋಬರ್ 17, 2021
23 °C
2008ರಲ್ಲಿ ಅಮೆರಿಕ ಸೇನಾ ಯೋಧರನ್ನು ಕೊಂದ ಆರೋಪ–ಪತ್ರಕರ್ತನನ್ನು ಅಪಹರಿಸಿದ ಕುಖ್ಯಾತನೀತ

ಅಮೆರಿಕ: ತಾಲಿಬಾನ್ ಮಾಜಿ ಕಮಾಂಡರ್ ವಿರುದ್ಧ ದೋಷಾರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: 2008ರಲ್ಲಿ ಅಮೆರಿಕದ ಪತ್ರಕರ್ತನನ್ನು ಅಪಹರಿಸಿ, ಪಾಕಿಸ್ತಾನದಲ್ಲಿ ಹಲವು ತಿಂಗಳುಗಳ ಕಾಲ ಬಂಧನದಲ್ಲಿಟ್ಟಿದ್ದ ತಾಲಿಬಾನ್‌ನ ಮಾಜಿ ಕಮಾಂಡರ್‌ ಒಬ್ಬನ ವಿರುದ್ಧ ಹಲವು ಸೈನಿಕರನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷೋರೋಪ ಹೊರಿಸಲಾಗಿದೆ.

ಹಾಜಿ ನಜಿಬುಲ್ಲಾ ಅಲಿಯಾಸ್‌ ನಜೀಬುಲ್ಲಾ ನಯೀಮ್ (45) ಎಂಬಾತನ ವಿರುದ್ಧ ಈ ದೋಷಾರೋಪ ಸಿದ್ಧಪಡಿಸಲಾಗಿದ್ದು, ಫೆಡರಲ್ ನ್ಯಾಯಾಲಯ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ಕಳೆದ ವರ್ಷ ಈತನನ್ನು ಬಂಧಿಸಿ, ಉಕ್ರೇನ್‌ನಿಂದ ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು. 2008ರಲ್ಲಿ ಅಫ್ಗಾನಿಸ್ತಾನದಲ್ಲಿ ಈತನ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಅಮೆರಿಕದ ಮೂವರು ಸೈನಿಕರು, ಅವರ ಅಫ್ಗನ್‌ ಭಾಷಾಂತರಕಾರ ಮೃತಪಟ್ಟಿದ್ದರು. ಅಮೆರಿಕದ ಸೇನಾ ಹೆಲಿಕಾಪ್ಟರ್‌ ಹೊಡೆದುರುಳಿಸಿದ ಆರೋಪವೂ ಈತನ ಮೇಲೆ ಇದೆ.

ದೋಷಾರೋಪದಲ್ಲಿ ಅಪಹೃತ ಅಮೆರಿಕದ ಪತ್ರಕರ್ತನ ಹೆಸರು ಉಲ್ಲೇಖವಾಗಿಲ್ಲ. ಆದರೆ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯ ಎರಡು ಬಾರಿ ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ ಡೇವಿಡ್‌ ರೋಡೆ ಅವರೇ ಈ ಪತ್ರಕರ್ತ ಎಂದು ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು