ಭಾನುವಾರ, ನವೆಂಬರ್ 28, 2021
20 °C
ಹೊಸದಾಗಿ ಟರ್ಕಿ, ಜೋರ್ಡಾನ್‌, ಮಾಲಿ ಸೇರ್ಪಡೆ

‘ಬೂದುಪಟ್ಟಿ’ಯಲ್ಲಿ ಪಾಕ್‌ ಮುಂದುವರಿಕೆ: ಎಫ್‌ಎಟಿಎಫ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪಾಕಿಸ್ತಾನವನ್ನು ‘ಬೂದು ಪಟ್ಟಿ‘ಯಲ್ಲಿಯೇ ಮುಂದುವರಿಸಲು ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್‌) ನಿರ್ಧರಿಸಿದೆ.

ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ಹಾಗೂ ಬೆಂಬಲ ನೀಡುವುದಕ್ಕೆ ಕಡಿವಾಣ ಹಾಕಲು ಎಫ್‌ಎಟಿಎಫ್‌ ಶ್ರಮಿಸುತ್ತದೆ.

ಪ್ಯಾರಿಸ್‌ನಲ್ಲಿ ನಡೆದ ಎಫ್‌ಎಟಿಎಫ್‌ನ ನಾಲ್ಕು ದಿನಗಳ ಸಾಮಾನ್ಯಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

‘ಪ್ರಧಾನಿ ಇಮ್ರಾನ್‌ಖಾನ್‌ ನೇತೃತ್ವ ಸರ್ಕಾರ ಎಫ್‌ಟಿಟಿಎಫ್‌ನ ನಿರೀಕ್ಷೆಯಂತೆ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಹೀಗಾಗಿ ಮುಂದಿನ ವರ್ಷ ಏಪ್ರಿಲ್‌ ವರೆಗೆ ಪಾಕಿಸ್ತಾನವನ್ನು ‘ಬೂದು ಪಟ್ಟಿ’ಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ’ ಎಂದು ಎಫ್‌ಎಟಿಎಫ್‌ ತಿಳಿಸಿದೆ.

ಟರ್ಕಿ, ಜೋರ್ಡಾನ್‌ ಹಾಗೂ ಮಾಲಿಯನ್ನು ಸಹ ‘ಬೂದು ಪಟ್ಟಿ’ಯಲ್ಲಿ ಸೇರಿಸಲು ನಿರ್ಧರಿಸಲಾಯಿತು ಎಂದೂ ಸಂಘಟನೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು