ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಚುನಾವಣೆ: ಹಿಂಸಾಚಾರದ ಆತಂಕ, ಪ್ರಮುಖ ಸ್ಥಳಗಳಲ್ಲಿ ಬಿಗಿ ಭದ್ರತೆ

Last Updated 3 ನವೆಂಬರ್ 2020, 7:19 IST
ಅಕ್ಷರ ಗಾತ್ರ

ವಾಷಿಂಗ್ಟನ್: ಚುನಾವಣಾ ದಿನ ಹಿಂಸಾಚಾರ ನಡೆಯುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ಶ್ವೇತಭವನ, ಪ್ರಮುಖ ವಾಣಿಜ್ಯ ಕೇಂದ್ರಗಳು, ಶಾಪಿಂಗ್‌ ಸ್ಥಳಗಳಲ್ಲಿ ಬಿಗಿ ಭದ್ರತೆ ನೀಡಲಾಗಿದೆ.

ಅಮೆರಿಕದಲ್ಲಿ ಮಂಗಳವಾರ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ರಕ್ಷಣಾ ಪಡೆಗಳು ಶ್ವೇತ ಭವನವನ್ನು ಸುತ್ತುವರಿದಿವೆ. ಸುರಕ್ಷತೆಯ ದೃಷ್ಟಿಯಿಂದ ಶ್ವೇತಭವನದ ಸುತ್ತಲೂ ತಾತ್ಕಾಲಿಕ ತಡೆಗೋಡೆಗಳನ್ನು ನಿರ್ಮಿಸಲಾಗಿದೆ.

ನ್ಯೂಯಾರ್ಕ್‌, ಬಾಸ್ಟನ್‌, ಉತ್ತರ ಮತ್ತು ದಕ್ಷಿಣ ಹೂಸ್ಟನ್‌, ವಾಷಿಂಗ್ಟನ್‌ ಡಿಸಿ, ಚಿಕಾಗೋ, ಸ್ಯಾನ್‌ಫ್ರಾಸಿಸ್ಕೋದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಹಲವರು ತಮ್ಮ ವಾಣಿಜ್ಯ ಕಟ್ಟಡ, ಕಿಟಕಿಗಳನ್ನು ಮರದಪಟ್ಟಿಗಳಿಂದ ರಕ್ಷಣೆಗೆ ಮುಂದಾಗಿದ್ದಾರೆ. ಅಲ್ಲದೆ, ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುತ್ತಿದ್ದಾರೆ.

ಮಂಗಳವಾರ ರಾತ್ರಿ ಮತದಾನ ಎಣಿಕೆ ವೇಳೆ ‘ಬ್ಲ್ಯಾಕ್‌ ಲೈವ್ ಮ್ಯಾಟರ್‌’ ಆಂದೋಲನದ ಗುಂಪು ಸೇರಿದಂತೆ ಎರಡೂ ಪಕ್ಷದ ಬೆಂಬಲಿಗರು ವಾಷಿಂಗ್ಟನ್‌ ಡಿಸಿ ಬಳಿ ಸೇರುವ ಸಂಭವವಿದೆ.

ಕಪ್ಪುವರ್ಣೀಯ ಜಾರ್ಜ್‌ ಫ್ಲಾಯ್ಡ್‌ ಸಾವು ವಿರೋಧಿಸಿ ವಾಷಿಂಗ್ಟನ್‌ನಲ್ಲಿ ಪ್ರತಿಭಟನೆ ವೇಳೆ ಹಿಂಸಾತ್ಮಾಕ ಘಟನೆಗಳು ನಡೆದಿದ್ದವು. ಈ ವೇಳೆ ಹಲವು ಅಂಗಡಿಗಳು ಹಾನಿಗೊಳಗಾಗಿದ್ದವು. ಹಾಗಾಗಿ ಚುನಾವಣೆಯ ದಿನದಂದು ಹಿಂಸಾತ್ಮಾಕ ಘಟನೆಗಳು ನಡೆಯುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ.

2020 ನೇ ಅಧ್ಯಕ್ಷೀಯ ಚುನಾವಣೆ ಅಮೆರಿಕದ ಇತಿಹಾಸದಲ್ಲಿಯೇ ಈವರೆಗಿನ ಅತ್ಯಂತ ಕುತೂಹಲಕಾರಿ ಚುನಾವಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT