ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ನಲ್ಲಿ ಪ್ರವಾಹ ಇಳಿಮುಖ: ಕೃಷಿ ಭೂಮಿಗೆ ನಗರದ ತ್ಯಾಜ್ಯ

ಸಾರಿಗೆ ಸಂಪರ್ಕ ದುರಸ್ತಿಗೆ ಆದ್ಯತೆ; ಪ್ರಧಾನಿ ಆರ್ಡೆರ್ನ್
Last Updated 1 ಜೂನ್ 2021, 6:23 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನಲ್ಲಿ ಮಂಗಳವಾರ ಪ್ರವಾಹದ ತೀವ್ರತೆ ಇಳಿಕೆಯಾಗಿದ್ದು, ಕ್ಯಾಂಟರ್‌ಬರಿಯಲ್ಲಿರುವ ಕೃಷಿ ಪ್ರದೇಶಗಳಿಗೆ ತೀವ್ರ ಹಾನಿಯಾಗಿದೆ, ಜತೆಗೆ ಪ್ರಮುಖ ಸೇತುವೆಯೊಂದಕ್ಕೆ ಹಾನಿಗೊಂಡಿದೆ.

‘ಪ್ರವಾಹದಿಂದ ಹಾನಿಗೊಳಗಾಗಿರುವ ಆಶ್‌ಬರ್ಟನ್ ಪಟ್ಟಣವನ್ನು ದಕ್ಷಿಣದ ಮುಖ್ಯ ಹೆದ್ದಾರಿಗೆ ಸಂಪರ್ಕಿಸುವ ಸೇತುವೆ ಸರಿಪಡಿಸಲು ಆದ್ಯತೆ ನೀಡಲಾಗುತ್ತದೆ. ಇದು ಎಷ್ಟು ಸಮಯ ತೆಗೆದುಕೊಳ್ಳುವುದೋ ಗೊತ್ತಿಲ್ಲ. ಆದರೆ, ಸಾರಿಗೆ ಸಂಪರ್ಕಗಳನ್ನು ಸರಿಪಡಿಸಲು ಆದ್ಯತೆ ನೀಡಲಾಗುತ್ತದೆ‘ ಎಂದು ‍ಪ್ರಧಾನಿ ಜಸಿಂಡಾ ಆರ್ಡೆನ್‌ ಸುದ್ದಿಗಾರರಿಗೆ ತಿಳಿಸಿದರು.

ಪ್ರವಾಹದಿಂದಾಗಿ ಪಶು ಆಹಾರ ಹಾಳಾಗಿದೆ. ಕೃಷಿಭೂಮಿಗೆ ಹಾಕಿದ್ದ ಬೇಲಿಗಳು ಮುರಿದಿವೆ. ಜಮೀನಿನಾದ್ಯಂತ ನಗರದ ಕಟ್ಟಡಗಳ ತ್ಯಾಜ್ಯಗಳು ಹರಡಿಕೊಂಡಿವೆ. ಇದರಿಂದ ಕೃಷಿಕರಿಗೆ ತೀವ್ರ ತೊಂದರೆಯಾಗಿದೆ. ಇವೆಲ್ಲವನ್ನೂ ಗಮನಿಸಲಾಗಿದೆ‘ ಎಂದು ಆರ್ಡೆರ್ನ್‌ ಹೇಳಿದರು. ‘ಹಾನಿಗೊಳಗಾದ ಕೃಷಿ ಜಮೀನನ್ನು ಸ್ವಚ್ಛಗೊಳಿಸುವ ಮೂಲಕ ರೈತರ ಬೆಂಬಲಕ್ಕೆ ನಿಲ್ಲುತ್ತೇವೆ‘ ಎಂದು ಭರವಸೆ ನೀಡಿದರು.

ನ್ಯೂಜಿಲೆಂಡ್‌ನ ಕ್ಯಾಂಟರ್‌ಬರಿ ಪ್ರದೇಶದಲ್ಲಿ ಸೋಮವಾರ ಭಾರಿ ಮಳೆ ಸುರಿದ ಪರಿಣಾಮ ಪ್ರವಾಹ ಸೃಷ್ಟಿಯಾಗಿತ್ತು. ನೂರಾರು ಜನರನ್ನು ಸುರಕ್ಷಿತ ‍ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಈ ರಾಜ್ಯದಲ್ಲಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT