ಮಂಗಳವಾರ, ಸೆಪ್ಟೆಂಬರ್ 28, 2021
25 °C

ಕೋವಿಡ್‌ ಉಲ್ಬಣ: ಫ್ಲಾರಿಡಾದಲ್ಲಿ 21,000 ಹೊಸ ಪ್ರಕರಣಗಳು ಪತ್ತೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಒರ್ಲಾಂಡೊ(ಅಮೆರಿಕ): ಫ್ಲಾರಿಡಾದಲ್ಲಿ ಶುಕ್ರವಾರ 21,683 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದು ಪಿಡುಗು ಆರಂಭಗೊಂಡ ಬಳಿಕ ಫ್ಲಾರಿಡಾದಲ್ಲಿ ವರದಿಯಾದ ಅತಿ ಹೆಚ್ಚು ದೈನಂದಿನ ಪ್ರಕರಣವಾಗಿದೆ ಎಂದು ಫೆಡರಲ್‌ ಆರೋಗ್ಯ ಇಲಾಖೆ ಶನಿವಾರ ತಿಳಿಸಿದೆ.

ಅಮೆರಿಕದಲ್ಲಿ ಡೆಲ್ಟಾ ರೂಪಾಂತರ ತಳಿಯು ಹರಡುತ್ತಿದ್ದು, ಫ್ಲಾರಿಡಾ ರಾಜ್ಯವು ವೈರಸ್‌ನ ಹೊಸ ರಾಷ್ಟ್ರೀಯ ಕೇಂದ್ರ ಬಿಂದುವಾಗಿದೆ.

ರಾಜ್ಯದಲ್ಲಿ ಈ ವಾರ 409 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆಯು  39,000ಕ್ಕೆ ಏರಿಕೆಯಾಗಿದೆ. ಫ್ಲಾರಿಡಾದಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಶೇಕಡ 60ರಷ್ಟು ಮಂದಿ ಲಸಿಕೆಯನ್ನು ಪಡೆದಿದ್ದಾರೆ.

‘ಕಳೆದ ವರ್ಷ ಕೋವಿಡ್‌ ಉತ್ತುಂಗದಲ್ಲಿದ್ದಾಗ ಆಸ್ಪತ್ರೆಯಲ್ಲಿ ಸೃಷ್ಟಿಯಾಗಿದ್ದ ಪರಿಸ್ಥಿತಿ ಈಗ ಮತ್ತೆ ಎದುರಾಗಿದೆ. ಕೋವಿಡ್‌ ರೋಗಿಗಳಿಗೆ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತನ್ನ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆಗಳನ್ನು ಮಾತ್ರ ನಡೆಸಲಾಗುವುದು’ ಎಂದು ಅಡ್ವೆಂಟ್‌ಹೆಲ್ತ್‌ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು