ಇಮ್ರಾನ್–ಝರ್ದಾರಿ ರಾಜಿ ಸಂಭಾಷಣೆ: ಆಡಿಯೊ ಬಹಿರಂಗ

ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ದೇಶದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರೊಂದಿಗೆ ರಾಜಿಯಾಗುವ ಇಚ್ಛೆ ಹೊಂದಿದ್ದಾರೆ ಎನ್ನಲಾದ ಆಡಿಯೊವೊಂದು ವೈರಲ್ ಆಗಿದೆ.
ಆಸಿಫ್ ಅಲಿ ಝರ್ದಾರಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಮಲಿಕ್ ರಿಯಾಜ್ ಅವರ ನಡುವೆ ನಡೆದ ಮಾತುಕತೆ ಎನ್ನಲಾದ ಆಡಿಯೊ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲಿ ರಿಯಾಜ್, ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್, ಜರ್ದಾರಿ ಅವರೊಂದಿಗೆ ಸಂಧಾನ ಸಭೆ ನಡೆಸುವ ಇಚ್ಛೆ ಹೊಂದಿದ್ದಾರೆಂದು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇಸ್ಲಾಮಾಬಾದ್ ಗಲಭೆ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರಕರಣ
ಇಮ್ರಾನ್ ಖಾನ್ ಸರ್ಕಾರ ವಿರೋಧಿ ಪ್ರತಿಭಟನೆಯನ್ನು ನಿಲ್ಲಿಸಿದ ಬೆನ್ನಲ್ಲೇ ಈ ಆಡಿಯೊ ವೈರಲ್ ಆಗಿದೆ. 32 ಸೆಕೆಂಡ್‌ಗಳ ಆಡಿಯೊದಲ್ಲಿ ರಿಯಾಜ್, ‘ಅವರು (ಇಮ್ರಾನ್ ಖಾನ್) ಹಲವು ಸಂದೇಶಗಳನ್ನು ಕಳುಹಿಸಿದ್ದಾರೆ‘ ಎಂದಿದ್ದಾರೆ. ಇದಕ್ಕೆ ಜರ್ದಾರಿ, ‘ಅದೀಗ ಸಾಧ್ಯವೇ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ಆದರೆ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಇದು ‘ನಕಲಿ ಆಡಿಯೊ’ ಎಂದು ಹೇಳಿದೆ. ಜರ್ದಾರಿ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸದಸ್ಯರು, ‘ಆಡಿಯೊ ಅಸಲಿ ಎಂಬಂತೆ ಕಾಣುತ್ತದೆ’ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.