ಬಂಜುಲ್: ಆಫ್ರಿಕಾ ಖಂಡದ ಗಾಂಬಿಯಾ ದೇಶದಲ್ಲಿ ಭಾರತ ಮೂಲದ ಔಷಧಿ ಕಂಪನಿಯ ಕೆಮ್ಮಿನ ಎಣ್ಣೆ ಸೇವಿಸಿ 70 ಮಕ್ಕಳು ಸಾವನ್ನಪ್ಪಿದ್ದರು ಎಂದುಕಳೆದ ಅಕ್ಟೋಬರ್‌ನಲ್ಲಿ ವ್ಯಾಪಕ ಸುದ್ದಿಯಾಗಿತ್ತು.
ಇದೀಗ ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ವರದಿ ಕೊಟ್ಟಿರುವ ಗಾಂಬಿಯಾದ ಸಂಸತ್‌ನ ಸಂಸದೀಯ ಸಮಿತಿ, ‘70 ಮಕ್ಕಳ ಸಾವಿಗೆ ಭಾರತದ‘ಮೈಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ಕಂಪನಿ’ ನೇರ ಕಾರಣ ಎಂದು ಆರೋಪಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆಮೈಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಕಂಪನಿಯನ್ನು ಗಾಂಬಿಯಾದಲ್ಲಿ ನಿಷೇಧ ಮಾಡಬೇಕು ಹಾಗೂ ಕಾನೂನಿನ ಮೂಲಕ ಶಿಕ್ಷೆ ವಿಧಿಸುವ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸಕ್ಷಮ ಪ್ರಾಧಿಕಾರಕ್ಕೆ ಆದೇಶ ಕೊಟ್ಟಿದೆ. ಅಲ್ಲದೇ ದೇಶಕ್ಕೆ ವಿದೇಶಗಳಿಂದ ಬರುವ ಔಷಧಿ ಕಂಪನಿಗಳ ಹಿನ್ನೆಲೆಯನ್ನು ಸಂಪೂರ್ಣ ಪರಿಶೀಲಿಸಿ ಪಾರದರ್ಶಕತೆಯಿಂದ ವ್ಯವಹಾರ ಮಾಡಬೇಕು ಎಂದು ತಾಕೀತು ಮಾಡಿದೆ.
ಪ್ರೊಮೆಥಜೈನ್ ಓರಲ್ ಸಲ್ಯೂಷನ್, ಕೊಫೆಕ್ಸ್‌ಮಲಿನ್ ಬೇಬಿ ಕಫ್ ಸಿರಪ್, ಮ್ಯಾಕಫ್ ಬೇಬಿ ಕಫ್ ಸಿರಪ್ ಮತ್ತು ಮಾಗ್ರಿಪ್ ಅಂಡ್ ಕೋಲ್ಡ್ ಸಿರಪ್ ಹೆಸರಿನ ಈ ಎಲ್ಲಾ ಸಿರಪ್‌ಗಳನ್ನು ಮೈಡನ್ ಫಾರ್ಮಾಸ್ಯುಟಿಕಲ್ಸ್ ಲಿ. ತಯಾರಿಸಿರುವುದು ದೃಡಪಟ್ಟಿದೆ ಎಂದು ಸಮಿತಿ ಹೇಳಿದೆ.
ಗಾಂಬಿಯಾದಲ್ಲಿ ಗುರುತಿಸಲಾಗಿರುವ ಈ ನಾಲ್ಕು ಕಲುಷಿತ ಔಷಧಿಗಳನ್ನು ಸೇವಿಸಿದ 70 ಮಕ್ಕಳಲ್ಲಿ ತೀವ್ರತರವಾದ ಮೂತ್ರಪಿಂಡದ ಸಮಸ್ಯೆ, ವಾಂತಿ, ಹೊಟ್ಟೆನೋವು, ಅತಿಸಾರ, ತಲೆನೋವು ಕಾಣಿಸಿಕೊಂಡಿತ್ತು. ಈ ಮಕ್ಕಳ ಜೀವ ನಷ್ಟವು ಅವರ ಕುಟುಂಬಗಳ ಪಾಲಿಗೆ ದೊಡ್ಡ ನೋವು ನೀಡಿದೆ’ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕಟೆಡ್ರೊಸ್ ಅಧಾನಮ್ ಗೆಬ್ರಿಯೇಸಸ್ ಕೂಡ ಹೇಳಿದ್ದರು.
ಆದರೆ,ಮೈಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಕಂಪನಿ ಈ ಆರೋಪಗಳನ್ನು ನಿರಾಕರಿಸಿತ್ತು. ತನ್ನ ಔಷಧಿಗಳು ಸುರಕ್ಷಿತ ಎಂದು ವಾದಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.