ಶನಿವಾರ, ಮಾರ್ಚ್ 25, 2023
29 °C

ಕೋವಿಡ್‌: ಜಾಗತಿಕವಾಗಿ 40 ಲಕ್ಷ ದಾಟಿದ ಸಾವಿನ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಕೋವಿಡ್‌–19ರಿಂದಾಗಿ ವಿಶ್ವದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 40 ಲಕ್ಷ ದಾಟಿದೆ. ಒಂದೆಡೆ ಲಸಿಕೆ ಅಭಿಯಾನ ನಡೆಯುತ್ತಿದ್ದರೆ, ಇನ್ನೊಂದೆಡೆ ಕೊರೊನಾದ ಡೆಲ್ಟಾ ರೂಪಾಂತರಿ ಬಿಕ್ಕಟ್ಟನ್ನು ಹೆಚ್ಚಿಸುತ್ತಿದೆ ಎಂದು ಒಸ್ಲೊವಿನ ಶಾಂತಿ ಸಂಶೋಧನಾ ಸಂಸ್ಥೆ ತಿಳಿಸಿದೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ ಅಂಶಗಳನ್ನು ಆಧಾರಿಸಿ ಮಾಹಿತಿ ನೀಡಿರುವ ಸಂಸ್ಥೆಯು, ಒಂದೂವರೆ ವರ್ಷಗಳಲ್ಲಿ ಮೃತಪಟ್ಟವರ ಪ್ರಮಾಣವು 1982ರಿಂದ ವಿಶ್ವದಲ್ಲಿ ನಡೆದಿರುವ ಎಲ್ಲ ಯುದ್ಧಗಳಲ್ಲಿ ಅಸುನೀಗಿದವರ ಸಂಖ್ಯೆಗೆ ಸಮವಾಗಿದೆ ಎಂದು ಅಂದಾಜಿಸಿದೆ.

ಈ ಸಾವಿನ ಸಂಖ್ಯೆಯು ಪ್ರತಿ ವರ್ಷ ಜಾಗತ್ತಿನಾದ್ಯಂತ ಸಂಭವಿಸುವ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಮೂರು ಪಟ್ಟಿಗಿಂತ ಹೆಚ್ಚು. ಇದು ಲಾಸ್‌ ಏಂಜಲೀಸ್‌ ಅಥವಾ ಜಾರ್ಜಿಯಾ ದೇಶದ ಜನಸಂಖ್ಯೆ ಸಮ. ಇದು ಹಾಂಗ್‌ಕಾಂಗ್‌ನ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಅಥವಾ ನ್ಯೂಯಾರ್ಕ್‌ ನಗರದ ಜನಸಂಖ್ಯೆಯ ಶೇ 50ರ ಸಮೀಪದಲ್ಲಿದೆ ಎಂದು ಅದು ಹೇಳಿದೆ.

ವಿಶ್ವದಾದ್ಯಂತ ಜನವರಿಯಲ್ಲಿ ನಿತ್ಯ 18 ಸಾವಿರಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸುತ್ತಿದ್ದವು. ಆದರೆ ಲಸಿಕೆಯಿಂದಾಗಿ ಸಾವಿನ ಸಂಖ್ಯೆ ಕಡಿಮೆಯಾಗಿದ್ದು, ನಿತ್ಯ 7,900ರಷ್ಟು ಸಾವುಗಳು ಸಂಭವಿಸುತ್ತಿವೆ ಎಂದು ಅದು ತಿಳಿಸಿದೆ.

ಇತ್ತೀಚಿನ ವಾರಗಳಲ್ಲಿ ಡೆಲ್ಟಾ ರೂಪಾಂತರಿತ ತಳಿಯು ವಿಶ್ವದಾದ್ಯಂತ ವ್ಯಾಪಕವಾಗಿ ಪ್ರಸರಣವಾಗುತ್ತಿದೆ. ಇದು ಅಮೆರಿಕ, ಬ್ರಿಟನ್‌, ಇಸ್ರೇಲ್‌ನಲ್ಲೂ ವೇಗವಾಗಿ ಹರಡುತ್ತಿದೆ ಎಂದು ಹೇಳಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು