ಗುರುವಾರ , ಆಗಸ್ಟ್ 11, 2022
23 °C
ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಧೀಶರ ಆದೇಶ

ಎಚ್‌1ಬಿ ವೀಸಾ: ಡೊನಾಲ್ಡ್ ಟ್ರಂಪ್‌ ನಿಯಮ ರದ್ದು

ಪಿಟಿಐ/ಪಿಐಬಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಆಡಳಿತ ಪ್ರಸ್ತಾಪಿಸಿದ್ದ ಎಚ್‌1ಬಿ ವೀಸಾಗೆ ಸಂಬಂಧಪಟ್ಟ ಎರಡು ನಿಯಮಾವಳಿಗಳನ್ನು ಅಮೆರಿಕದ ಕೋರ್ಟ್ ನಿರ್ಬಂಧಿಸಿದೆ. ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಅಮೆರಿಕದ ಐಟಿ ಕಂಪನಿಗಳಿಗೆ ನಿರ್ಬಂಧ ಹೇರುವ ನಿಯಮಾವಳಿಗಳಿಗೆ ಕೋರ್ಟ್ ತಡೆ ನೀಡಿದೆ. ಹೀಗಾಗಿ ಅಮೆರಿಕದ ಐಟಿ ಕಂಪನಿಗಳು ಹಾಗೂ ಸಾವಿರಾರು ಭಾರತೀಯ ಐಟಿ ಉದ್ಯೋಗಿಗಳು ನಿರಾಳರಾಗಿದ್ದಾರೆ.

ವಿದೇಶದ ತಂತ್ರಜ್ಞರು ಹಾಗೂ ಪರಿಣಿತರನ್ನು ನೇಮಕ ಮಾಡಿಕೊಳ್ಳಲು ಅಮೆರಿಕದ ಕಂಪನಿಗಳಿಗೆ ಎಚ್‌1ವಿ ವೀಸಾ ಅವಕಾಶ ನೀಡುತ್ತದೆ. ಅಮೆರಿಕವು ಪ್ರತಿ ವರ್ಷ ಸುಮಾರು 85 ಸಾವಿರ ವೀಸಾ ವಿತರಿಸುತ್ತದೆ. ಮೂರು ವರ್ಷಗಳ ಅವಧಿಗೆ ವೀಸಾ ನೀಡಲಾಗುತ್ತದೆ. ಅವುಗಳನ್ನು ನವೀಕರಣ ಮಾಡಬಹುದು. ಸುಮಾರು 6 ಲಕ್ಷ ವೀಸಾದಾರರು ಭಾರತ ಹಾಗೂ ಚೀನಾ ದೇಶದವರು.

ಅಮೆರಿಕದ ಕಂಪನಿಗಳು ಅತಿಹೆಚ್ಚು ವೇತನ ಪಡೆಯುವ ವಿದೇಶಿ ನೌಕರರರಿಗೆ ಎಚ್1ಬಿ ವೀಸಾ ನೀಡಬೇಕು ಎಂಬುದಾಗಿ ಟ್ರಂಪ್ ಆಡಳಿತ ತರಲು ಉದ್ದೇಶಿಸಿದ್ದ ಹೊಸ ನೀತಿಗೆ ಕ್ಯಾಲಿಫೋರ್ನಿಯಾ ಜಿಲ್ಲಾ ಕೋರ್ಟ್ ನ್ಯಾಯಾಧೀಶ ಜೆಫ್ರಿ ವೈಟ್ ಅವರು ತಡೆ ನೀಡಿದ್ದಾರೆ.

ಅಮೆರಿಕದ ಐಟಿ ಕಂಪನಿಗಳು ಎಚ್‌1ಬಿ ವೀಸಾಗೆ ಕೊಟ್ಟಿರುವ ‌ಪ್ರಾಮುಖ್ಯತೆಯನ್ನು ಕಡಿಮೆ ಮಾಡುವ ಮತ್ತೊಂದು ನೀತಿಯನ್ನೂ ಕೋರ್ಟ್ ತಳ್ಳಿಹಾಕಿದೆ.

ತೀರ್ಪಿನ ಪರಿಣಾಮವಾಗಿ, ಡಿಸೆಂಬರ್ 7ರಿಂದ ಜಾರಿಗೆ ಬರಬೇಕಿದ್ದ ಉದ್ಯೋಗಗಳು ಮತ್ತು ಇತರ ವಿಷಯಗಳ ಬಗೆಗಿನ ಭದ್ರತಾ ಇಲಾಖೆಯ ನಿಯಮಗಳು ಅಮಾನ್ಯಗೊಂಡಿವೆ. ಜೊತೆಗೆ ಅಕ್ಟೋಬರ್ 8ರಿಂದ ಜಾರಿಗೆ ಬಂದಿರುವ  ವೇತನದ ಮೇಲಿನ ಕಾರ್ಮಿಕ ಇಲಾಖೆಯ ನಿಯಮವೂ ಮಾನ್ಯತೆ ಕಳೆದುಕೊಳ್ಳಲಿದೆ.

ಅಮೆರಿಕದ ವಾಣಿಜ್ಯೋದ್ಯಮ ಸಂಘ, ಸ್ಟ್ಯಾನ್‌ಫೋರ್ಡ್ ಸೇರಿದಂತೆ ಪ್ರಮುಖ ವಿಶ್ವವಿದ್ಯಾಲಯಗಳು, ಗೂಗ‌ಲ್, ಫೇಸ್‌ಬುಕ್, ಮೈಕ್ರೊಸಾಫ್ಟ್ ಸೇರಿದಂತೆ ಸಿಲಿಕಾನ್ ವ್ಯಾಲಿಯ ಪ್ರಮುಖ ಕಂಪನಿಗಳು ಕೋರ್ಟ್ ಮೆಟ್ಟಿಲೇರಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು