ವಾಷಿಂಗ್ಟನ್: ಲಸಿಕೆಯ ಪರಿಣಾಮ ಕೋವಿಡ್‌ನಿಂದ ಸಂಭವಿಸಬಹುದಾಗಿದ್ದ ಶೇ 80ಕ್ಕಿಂತ ಹೆಚ್ಚು ಸಾವುಗಳು ನಿಯಂತ್ರಣಕ್ಕೆ ಬಂದಿವೆ ಎಂದು ಅಮೆರಿಕದ ಅಧ್ಯಯನ ವರದಿಯೊಂದು ತಿಳಿಸಿದೆ.

ಅಮೆರಿಕದ 48 ರಾಜ್ಯಗಳು ಮತ್ತು 2558 ಕೌಂಟಿಗಳನ್ನು ಒಳಗೊಂಡ ಈ ಅಧ್ಯಯನದಲ್ಲಿ ಲಸಿಕೆ ಪಡೆಯದ ಕೌಂಟಿಗಳಿಗೆ ಹೋಲಿಸಿದರೆ, ಲಸಿಕೆ ಪಡೆದ ಕೌಂಟಿಗಳಲ್ಲಿ ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಿದೆ ಎಂದು ಉಲ್ಲೇಖಿಸಲಾಗಿದೆ.

2022ರ ಏಪ್ರಿಲ್ 11ರವರೆಗೆ ಜಾಗತಿಕವಾಗಿ 1,100ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. 2022ರ ಮಧ್ಯಂತರ ಅವಧಿ ವೇಳೆಗೆ ವಿಶ್ವದ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ 70ರಷ್ಟು ಮಂದಿಗೆ ಲಸಿಕೆ ನೀಡುವುದು ವಿಶ್ವ ಆರೋಗ್ಯ ಸಂಸ್ಥೆಯ ಗುರಿಯಾಗಿದೆ.

ತೈವಾನ್‌ನಲ್ಲಿ ಒಂದೇ ದಿನ 10,000 ಮಂದಿಗೆ ಸೋಂಕು

ತೈಪೆ(ಎಎಫ್‌ಪಿ): ತೈವಾನ್ ದೇಶದಲ್ಲಿ ಗುರುವಾರ ಒಂದೇ ದಿನ 10,000ಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ದೇಶದಲ್ಲಿ ಶೂನ್ಯ ಕೋವಿಡ್ ನಿಯಮದಿಂದ ಸರ್ಕಾರ ಹಿಂದೆ ಸರಿದ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಅಲ್ಲದೆ ಒಂದು ವಾರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 37,000ಕ್ಕಿಂತ ಹೆಚ್ಚಾಗಲಿದೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.

ಈ ವರ್ಷದ ಜನವರಿ 1ರಿಂದ ಈವರೆಗೆ 51,504 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ಶೇ 99.7ರಷ್ಟು ಮಂದಿ ಸೌಮ್ಯ ಪ್ರಮಾಣದ ಅಥವಾ ಲಕ್ಷಣ ರಹಿತ ಸೋಂಕಿತರಾಗಿದ್ದಾರೆ ಎಂದು ತೈವಾನ್ ಆರೋಗ್ಯ ಇಲಾಖೆ ಹೇಳಿದೆ.

ಇದನ್ನೂ ಓದಿ–ಆರು ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ: ಅನುಮತಿ ಕೋರಿದ ಮಾಡೆರ್ನಾ

ಶಾಂಘೈ: ಕೊರೊನಾ ಸಾವಿನ ವರದಿ ಬಗ್ಗೆ ಶಂಕೆ

ಶಾಂಘೈ(ರಾಯಿಟರ್ಸ್): ಚೀನಾದ ಅತಿದೊಡ್ಡ ನಗರ ಶಾಂಘೈನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಸಾವಿನ ಸಂಖ್ಯೆ ಕಡಿಮೆ ಇರುವ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಮಾರ್ಚ್ ಆರಂಭದಿಂದ ಶಾಂಘೈನಲ್ಲಿ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿತ್ತು. ಆದರೆ ಸಾವಿನ ಸಂಖ್ಯೆ ಮಾತ್ರ ಶೂನ್ಯವಿತ್ತು. 2.5 ಕೋಟಿ ಜನಸಂಖ್ಯೆ ಇರುವ ಶಾಂಘೈನಲ್ಲಿ ಏಪ್ರಿಲ್ 17ರಿಂದ ಈವರೆಗೆ 5 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 285 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

ಆದರೆ 74 ಲಕ್ಷ ಜನರು ಇರುವ ಹಾಂಗ್‌ಕಾಂಗ್‌ನಲ್ಲಿ ಫೆಬ್ರುವರಿಯಿಂದ ಈವರೆಗೆ 12 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 9,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಹೀಗಾಗಿ ಶಾಂಘೈನ ಕೊರೊನಾ ಲೆಕ್ಕದ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಏತನ್ಮಧ್ಯೆ, ಕೊರೊನಾ ವೈರಸ್ ಆರಂಭವಾದಾಗಿನಿಂದಲೂ ಚೀನಾ ಸರ್ಕಾರ, ಕೋವಿಡ್ ವೈರಸ್ ಬಗ್ಗೆ ಸರಿಯಾದ ಮಾಹಿತಿ ಬಹಿರಂಗಪಡಿಸುತ್ತಿಲ್ಲ ಎಂಬ ಆರೋಪ ಮೊದಲಿನಿಂದಲೂ ಇದ್ದೇ ಇದೆ.

ಸೋಂಕು ನಿಯಂತ್ರಣ: ಲ್ಯಾಟಿನ್ ಅಮೆರಿಕದಲ್ಲಿ ನಿರ್ಬಂಧ ಸಡಿಲಿಕೆ

ಬೊಗೊಟಾ(ಎಪಿ): ಏಷ್ಯಾದ ಕೆಲವು ದೇಶಗಳಲ್ಲಿ ಕೊರೊನಾ ವೈರಸ್ ಹಾವಳಿ ಮತ್ತೆ ಹೆಚ್ಚಾಗಿರುವ ಬೆನ್ನಲ್ಲೇ, ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಹೇರಲಾಗಿದ್ದ ಬಿಗಿ ಕ್ರಮಗಳನ್ನು ಸಡಿಲಗೊಳಿಸಲು ನಿರ್ಧರಿಸಲಾಗಿದೆ.

ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದಕ್ಷಿಣ ಅಮೆರಿಕದ ಚಿಲಿ ದೇಶವು ಮುಂದಿನ ವಾರದಲ್ಲಿ ತನ್ನೆಲ್ಲಾ ಗಡಿಗಳನ್ನು ಮುಕ್ತಗೊಳಿಸಲು ನಿರ್ಧರಿಸಿದೆ. ಕೊರೊನಾ ಸಾಂಕ್ರಮಿಕ ಅಂತ್ಯವಾಗಿದೆ ಎಂದುಮೆಕ್ಸಿಕೊ ಅಧ್ಯಕ್ಷರು ಘೋಷಿಸಿದ್ದಾರೆ. ಅಲ್ಲದೆ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬುದು ಸೇರಿದಂತೆ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.