ಬುಧವಾರ, ಆಗಸ್ಟ್ 4, 2021
21 °C

ಸಿಂಧ್‌ ಪ್ರಾಂತ್ಯ: ಹಿಂದೂ, ಕ್ರಿಶ್ಚಿಯನ್ನರ ಬಲವಂತದ ಮತಾಂತರ– ಅಮೆರಿಕ ಸಂಸದ ಕಳವಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ನರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ಅಮೆರಿಕದ ಪ್ರಭಾವಿ ಸಂಸದ ಬ್ರಾಡ್‌ ಶೆರ್ಮನ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಪ್ರದೇಶವು ಅಮೆರಿಕದ ಆರ್ಥಿಕ ನೆರವನ್ನು ಪಡೆದುಕೊಳ್ಳುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಅವರು ಬೈಡನ್‌ ಆಡಳಿತವನ್ನು ಒತ್ತಾಯಿಸಿದ್ದಾರೆ.

‘ಯುಎಸ್‌ಎಐಡಿ’ ಆಡಳಿತಾಧಿಕಾರಿ ಸಮಂತಾ ಪವಾರ್‌ ಅವರೊಂದಿಗಿನ ಸಂಸದರ ಸಭೆಯಲ್ಲಿ ಮಾತನಾಡಿದ ಅವರು, ಶ್ರೀಲಂಕಾದಲ್ಲಿನ ಮಾನವ ಹಕ್ಕುಗಳ ಸಮಸ್ಯೆಗಳ ಕುರಿತೂ ಪ್ರಸ್ತಾಪಿಸಿದ್ದಾರೆ.

ಶ್ರೀಲಂಕಾದ ಅಂತರ್ಯುದ್ಧದಿಂದಾಗಿ ಆ ದೇಶದ ಉತ್ತರ ಮತ್ತು ಪೂರ್ವ ಭಾಗಗಳು ನಾಶವಾಗಿವೆ ಎಂದ ಅವರು, ‘ದಕ್ಷಿಣ ಪಾಕಿಸ್ತಾನದ ಸಿಂಧ್‌ ಪ್ರಾಂತ್ಯಕ್ಕೆ ನಾವು ನೆರವನ್ನು ನೀಡುತ್ತಿದ್ದೇವೆ ಎಂದು ಭಾವಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ಈ ಪ್ರದೇಶವು ಅಮೆರಿಕದ ನೆರವಿನ ನ್ಯಾಯಯುತ ಪಾಲನ್ನು ಪಡೆಯುತ್ತಿದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳುತ್ತಿದ್ದೀರಿ ಎಂದೂ ನಾನು ಭಾವಿಸುತ್ತೇನೆ’ ಎಂದ ಅವರು, ಈ ಪ್ರದೇಶದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರು ಬಲವಂತದ ಮತಾಂತರವವನ್ನು ಎದುರಿಸುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಶೆರ್ಮನ್ ಅವರು ಎತ್ತಿದ ಪ್ರಶ್ನೆಗಳಿಗೆ ಸಮಂತಾ ಪವಾರ್ ಅವರು ನೇರ ಉತ್ತರ ನೀಡಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು