ಸೋಮವಾರ, ಜನವರಿ 24, 2022
28 °C
ಭಾರತ, ಅಮೆರಿಕ ಹಾಗೂ ಕೊಲ್ಲಿ ರಾಷ್ಟ್ರಗಳಿಂದ ಬಂದಿದ್ದ ಭಕ್ತರು

ಪಾಕ್: ನವೀಕೃತ ಮಹಾರಾಜ ಪರಮಹಂಸ ದೇವಸ್ಥಾನಕ್ಕೆ ಹಿಂದೂಗಳ ಭೇಟಿ, ಪೂಜೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪೆಶಾವರ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ತೆರಿ ಗ್ರಾಮದಲ್ಲಿರುವ ನವೀಕೃತ ಮಹಾರಾಜ ಪರಮಹಂಸ ಮಂದಿರಕ್ಕೆ ಭಾರತ, ಅಮೆರಿಕ ಹಾಗೂ ಕೊಲ್ಲಿ ರಾಷ್ಟ್ರಗಳಿಂದ ಬಂದಿದ್ದ ಹಿಂದೂಗಳು ಭಾರಿ ಭದ್ರತೆ ನಡುವೆ ಶನಿವಾರ ಭೇಟಿ ನೀಡಿ, ಪೂಜೆ ಸಲ್ಲಿಸಿದರು.

ಭಾರತದಿಂದ 200, ದುಬೈನಿಂದ 15 ಜನರು ಹಾಗೂ ಉಳಿದವರು ಅಮೆರಿಕ ಹಾಗೂ ಇತರ ಕೊಲ್ಲಿ ರಾಷ್ಟ್ರಗಳಿಂದ ಬಂದಿದ್ದರು ಎಂದು ಮೂಲಗಳು ಹೇಳಿವೆ.

ಪಾಕಿಸ್ತಾನದ ಹಿಂದೂ ಪರಿಷತ್‌ ಹಾಗೂ ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ ಜಂಟಿಯಾಗಿ, ನವೀಕೃತ ದೇವಸ್ಥಾನಕ್ಕೆ ಹಿಂದೂಗಳ ಭೇಟಿ ಕಾರ್ಯಕ್ರಮದ ವ್ಯವಸ್ಥೆ ಮಾಡಿದ್ದವು.

ದೇವಸ್ಥಾನ 100 ವರ್ಷ ಹಳೆಯದಾಗಿದ್ದು, ಮಹಾರಾಜ ಪರಮಹಂಸರ ಸಮಾಧಿಯೂ ಇಲ್ಲಿದೆ. ಕಳೆದ ವರ್ಷ ಜಮಿಯತ್ ಉಲೆಮಾ ಇ–ಇಸ್ಲಾಂ ಪಕ್ಷದ ಬೆಂಬಲಿಗರು ಈ ದೇವಸ್ಥಾನವನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಿದ್ದರು. ಈ ಕೃತ್ಯಕ್ಕೆ ಜಾಗತಿಕವಾಗಿ ಖಂಡನೆ ವ್ಯಕ್ತವಾಗಿತ್ತು. ಪ್ರಾಂತೀಯ ಸರ್ಕಾರವು ಈ ದೇವಸ್ಥಾನವನ್ನು ₹ 3.3 ಕೋಟಿ ವೆಚ್ಚದಲ್ಲಿ ನವೀಕರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು