ಮಂಗಳವಾರ, ನವೆಂಬರ್ 24, 2020
26 °C
ಜಲವಿದ್ಯುತ್ ಉತ್ಪಾದಕ ಅಣೆಕಟ್ಟು ತೆರವಿನ ಯೋಜನೆಗೆ ಮರುಜೀವ

ಅಮೆರಿಕ: ನಾಲ್ಕು ಅಣೆಕಟ್ಟು ತೆರವಿಗೆ ದಾರಿ ಮಾಡಿಕೊಟ್ಟ ಐತಿಹಾಸಿಕ ಒಪ್ಪಂದ

ಎಪಿ Updated:

ಅಕ್ಷರ ಗಾತ್ರ : | |

Prajavani

ಪೋರ್ಟ್‌ಲ್ಯಾಂಡ್‌(ಅಮೆರಿಕ): ಅಮೆರಿಕದಲ್ಲಿ ಮಂಗಳವಾರ ಘೋಷಿಸಿರುವ ಐತಿಹಾಸಿಕ ಒಪ್ಪಂದಕ್ಕೆ ಅನುಮೋದನೆ ದೊರೆತು ಕಾರ್ಯರೂಪಕ್ಕೆ ಬಂದರೆ, ಅಮೆರಿಕದಲ್ಲಿರುವ ಬೃಹತ್ ಅಣೆಕಟ್ಟುಗಳನ್ನು ತೆರವುಗೊಳಿಸುವ ಯೋಜನೆ ಮರುಜೀವ ಪಡೆದುಕೊಳ್ಳಲಿದೆ.

ಅಷ್ಟೇ ಅಲ್ಲ, ಇದು ಒರೆಗಾನ್-ಕ್ಯಾಲಿಫೋರ್ನಿಯಾ ಗಡಿಯಿಂದ ಸಾಲ್ಮನ್‌ವರೆಗಿರುವ ನೂರಾರು ಮೈಲುಗಳಷ್ಟು ಜಲಮಾರ್ಗವನ್ನು ಪುನರಾರಂಭಿಸಲು ಭರವಸೆ ನೀಡಲಿದ್ದು, ಇದರಿಂದಾಗಿ ಈ ಜಲಮಾರ್ಗದ ಸಮೀಪದಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಜೀವಿಸುತ್ತಿರುವ ಬುಡಕಟ್ಟು ಸಮುದಾಯದವರ ಬದುಕು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಈ ಒಪ್ಪಂದಕ್ಕೆ ಅನುಮೋದನೆ ದೊರತರೆ, ಕ್ಲಾಮತ್‌ ನದಿಯ ತಗ್ಗಿನ ಪ್ರದೇಶದಲ್ಲಿರುವ ನಾಲ್ಕು ಬೃಹತ್ ಜಲವಿದ್ಯುತ್‌ ಉತ್ಪಾದಕ ಅಣೆಕಟ್ಟುಗಳನ್ನು ತೆರವುಗೊಳಿಸುವ ಯೋಜನೆ ಮರುಜೀವ ಪಡೆದುಕೊಳ್ಳಲಿದೆ. ಅತ್ಯಂತ ಮಹತ್ವಾಕಾಂಕ್ಷೆಯ ಸಾಲ್ಮನ್ ಪುನಶ್ಚೇತನದ ಪ್ರಯತ್ನಕ್ಕೆ ಅಡಿಪಾಯ ಸಿಕ್ಕಂತಾಗುತ್ತದೆ. ಆದರೆ, ಒಪ್ಪಂದವನ್ನು ಮೊಕದ್ದಮೆಗಳ ಮೂಲಕ ಪ್ರಶ್ನಿಸಲು ಸಾಧ್ಯವಿದೆ.

ಇದನ್ನೂ ಓದಿ: 

ಕ್ಲಾಮತ್‌ ನದಿ ಪಾತ್ರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಈ ಹಿಂದೆ ನಡೆದ ಹಲವು ಕಾನೂನಾತ್ಮಕ ಪ್ರಯತ್ನಗಳು ವಿಫಲವಾದವು. ಜತೆಗೆ ನದಿ ಪಾತ್ರದಲ್ಲಿದ್ದ ಬುಡಕಟ್ಟು ಸಮುದಾಯದವರು, ಮೀನುಗಾರರ ಗುಂಪು, ರೈತರು ಮತ್ತು ಪರಿಸರವಾದಿಗಳಲ್ಲಿ ಅಪನಂಬಿಕೆ ಉಂಟಾಗುವಂತೆ ಮಾಡಿತು.‌ ಅಣೆಕಟ್ಟು ತೆರವು ವಿರೋಧಿಗಳು, ‘ಜಲಾಶಯ ತೆರವಿನಿಂದ ತಮ್ಮ ಆಸ್ತಿ ಮೌಲ್ಯಗಳು ಮತ್ತು ಕಾಳ್ಗಿಚ್ಚುಗಳ ವಿರುದ್ಧ ಹೋರಾಡಲು ನೀರಿನ ಮೂಲವನ್ನು ಕಳೆದುಕೊಳ್ಳುವ ಬಗ್ಗೆ ಚಿಂತೆ ಮಾಡಿದ್ದರು.

‘ಈ ಅಣೆಕಟ್ಟು ತೆರವುಗೊಳಿಸುವ ಯೋಜನೆ ಕೇವಲ ಕಾಂಕ್ರಿಟ್‌ ರಚನೆಯನ್ನು ತೆರವುಗೊಳಿಸುವುದಕ್ಕಷ್ಟೇ ಸೀಮಿತವಾಗಬಾರದು. ಇದೊಂದು ಹೊಸ ಯುಗ ಅಥವಾ ಹೊಸ ಪರ್ವವನ್ನೇ ಸೃಷ್ಟಿಸುವಂತಾಗಬೇಕು‘ ಎಂದು ಯುರೊಕ್‌ ಬುಡಕಟ್ಟು ಸಮುದಾದಯದ ಅಧ್ಯಕ್ಷ ಜೋಸೆಫ್ ಜೇಮ್ಸ್‌ ಹೇಳಿದ್ದಾರೆ. ‘ಹರಿಯುವ ನದಿಗೆ ಅಣೆಕಟ್ಟು ಕಟ್ಟಲು ನಾವು ಯಾರು? ಹಾಗಾಗಿ ಈ ಅಣೆಕಟ್ಟುಗಳು ತೆರೆವಾಗುವುದರಿಂದ ನಮ್ಮ ಜೀವನ ವಿಧಾನವು ಅಭಿವೃದ್ಧಿ ಹೊಂದುತ್ತದೆ‘ ಎಂದು ಅವರು ಹೇಳಿದ್ದಾರೆ.

ಒರೆಗಾನ್ ಮತ್ತು ಕ್ಯಾಲಿಫೋರ್ನಿಯಾದಾದ್ಯಂತವಿರುವ ಬುಡಕಟ್ಟು ಜನಾಂಗದವರು, ಮೀನುಗಾರಿಕೆ ಗುಂಪುಗಳು ಮತ್ತು ಪರಿಸರವಾದಿಗಳು 2022 ರ ಹೊತ್ತಿಗೆ ಅಣೆಕಟ್ಟುಗಳ ತೆರವು ಕಾರ್ಯ ಆರಂಭಿಸಬೇಕೆಂದು ಆಶಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು