ನ್ಯೂಯಾರ್ಕ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಎರಡನೇ ಪತ್ನಿಯಾಗಿದ್ದ ರೇಹ್ಮಾ ಖಾನ್ ಇದೀಗ ಮೂರನೇ ಬಾರಿಗೆ ಮದುವೆಯಾಗಿದ್ದಾರೆ.

ಈ ಕುರಿತು ಸ್ವತಃ ರೇಹ್ಮಾ ಅವರೇ ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

ರೇಹ್ಮಾ ಅವರು ಅಮೆರಿಕದ ನಟ ಹಾಗೂ ರೂಪದರ್ಶಿ ಮಿರ್ಜಾ ಬಿಲಾಲ್ ಎನ್ನುವರನ್ನು ವರಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ‘ಕಡೆಗೂ ನಾನು ನಂಬುವಂತಹ ವ್ಯಕ್ತಿ ನನಗೆ ಸಿಕ್ಕಿದ’ ಎಂದು ಬರೆದುಕೊಂಡಿದ್ದಾರೆ.

ಮಾಜಿ ಕ್ರಿಕೆಟಿಗ ಕೂಡ ಆಗಿರುವ ಇಮ್ರಾನ್ ಖಾನ್ ಅವರನ್ನು 2015 ರಲ್ಲಿ ರೇಹ್ಮಾ ಮದುವೆಯಾಗಿದ್ದರು. ಕೇವಲ ಹತ್ತು ತಿಂಗಳಲ್ಲಿ ಈ ಜೋಡಿ ವಿಚ್ಚೇದನ ಪಡೆದಿತ್ತು. ಅದಕ್ಕೂ ಮುಂಚೆ ಅವರಿಗೆ ವಿವಾಹವಾಗಿತ್ತು.

ಲಿಬಿಯಾ ಮೂಲದರಾಗಿರುವ ರೇಹ್ಮಾ ಬ್ರಿಟಿಷ್ ಸುದ್ದಿಸಂಸ್ಥೆಗಾಗಿ ಪಾಕಿಸ್ತಾನದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುವಾಗ ಇ್ರಮಾನ್ ಖಾನ್ ಕಣ್ಣಿಗೆ ಬಿದ್ದು ಮದುವೆಯಾಗಿದ್ದರು. ಸದ್ಯ ಕಾರ್ಪೋರೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವರೇಹ್ಮಾ ಖಾನ್ ನ್ಯೂಯಾರ್ಕ್‌ನಲ್ಲಿ ನೆಲೆಸಿದ್ದಾರೆ.

ಕೇರಳದ ಈ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗೆ 60 ದಿನ ಮಾತೃತ್ವ ರಜೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.