ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆಯಲ್ಲಿ ರಷ್ಯಾ ಮಂಡಿಸಿದ ‘ಮಾನವೀಯ ಬಿಕ್ಕಟ್ಟು‘ ನಿರ್ಣಯಕ್ಕೆ ಸೋಲು

Last Updated 24 ಮಾರ್ಚ್ 2022, 2:41 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ:ಉಕ್ರೇನ್‌ನಲ್ಲಿ ‘ಮಾನವೀಯ ಬಿಕ್ಕಟ್ಟಿಗೆ‘ ಸಂಬಂಧಿಸಿದಂತೆವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ನಿರ್ಣಯ ಮಂಡಿಸಿದ್ದು, ಭಾರತ ತಟಸ್ಥ ನಿಲುವು ತಳೆದಿದೆ.

ಯುದ್ಧಪೀಡಿತ ಉಕ್ರೇನ್‌ ದೇಶದಲ್ಲಿ ಮಾನವೀಯತೆ ಬಿಕ್ಕಟ್ಟು ಉಂಟಾಗಿಲ್ಲ ಎಂದು ರಷ್ಯಾ ನಿರ್ಣಯ ಮಂಡಿಸಿತು. ಚೀನಾ ದೇಶ ರಷ್ಯಾ ಪರವಾಗಿ ಮತ ಚಲಾವಣೆ ಮಾಡಿದರೆ, ಭಾರತ ಸೇರಿದಂತೆ 12 ರಾಷ್ಟ್ರಗಳು ತಟಸ್ಥ ಧೋರಣೆ ಅನುಸರಿಸಿದ್ದು, ನಿರ್ಣಯದ ಪರ ಮತ ಚಲಾಯಿಸಿಲ್ಲ. ಇದರಿಂದ ರಷ್ಯಾನಿರ್ಣಯಕ್ಕೆ ಸೋಲಾಗಿದೆ.

ಭದ್ರತಾ ಮಂಡಳಿಯಲ್ಲಿ ಈ ನಿರ್ಣಯ ಅಂಗೀಕಾರವಾಗಲು ರಷ್ಯಾ ಪರವಾಗಿ 9 ದೇಶಗಳು ಮತ ಹಾಕುವ ಅಗತ್ಯವಿತ್ತು. ಆದರೆ ರಷ್ಯಾ ಆ ಮತಗಳನ್ನು ಪಡೆಯುವಲ್ಲಿ ವಿಫಲವಾಗಿದೆ.ರಷ್ಯಾ ಮತ್ತು ಚೀನಾ ಮಾತ್ರ ನಿರ್ಣಯದ ಪರವಾಗಿ ಮತ ಚಲಾಯಿಸಿವೆ. ನಿರ್ಣಯದ ವಿರುದ್ಧ ಯಾವ ರಾಷ್ಟ್ರವೂ ಮತ ಹಾಕಿಲ್ಲ.

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿ 4 ವಾರ ದಾಟಿದೆ. ಇಲ್ಲಿ ನಡೆಸುತ್ತಿರುವ ವಿಶೇಷ ಸೇನಾ ಕಾರ್ಯಾಚರಣೆಯಲ್ಲಿ ರಷ್ಯಾ ಇನ್ನೂ ಗುರಿ ಸಾಧಿಸಿಲ್ಲ. ಉಭಯ ದೇಶಗಳ ನಡುವೆ ‘ಸಂಘರ್ಷ ಶಮನದ‘ ಮಾತುಕತೆ ಕಠಿಣವಾಗಿದೆ ಎಂದು ರಷ್ಯಾದ ವಿದೇಶಾಂಗ ವಕ್ತಾರರು ಹೇಳಿದ್ದಾರೆ.

ರಷ್ಯಾ ಪಡೆಗಳು ಉಕ್ರೇನ್‌ನ ಪ್ರಮುಖ ನಗರಗಳ ಮೇಲಿನ ದಾಳಿಯನ್ನು ಮಂದುವೆರಸಿವೆ. ಬಂದರು ನಗರ ಮರಿಯುಪೊಲ್‌ ಮೇಲೆ ಬುಧವಾರ ಕೂಡ ನಿರಂತರ ಬಾಂಬ್‌ ಮತ್ತು ಶೆಲ್‌ ದಾಳಿ ನಡೆಸಿವೆ. ಈ ನಗರದಲ್ಲಿ ಸಿಲುಕಿಕೊಂಡಿರುವ ಸುಮಾರು ಒಂದು ಲಕ್ಷ ಜನರು ಅಮಾನವೀಯ ಪರಿಸ್ಥಿತಿಯಲ್ಲಿದ್ದಾರೆ. ಹಲವು ಜನರು ಹಸಿವಿನಿಂದ ನರಳುತ್ತಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT