ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್‌ನಲ್ಲಿ ಮಾನವ ಹಕ್ಕುಗಳ ರಕ್ಷಣೆ ಕುರಿತು ವಿಶ್ವಸಂಸ್ಥೆಯಲ್ಲಿ ನಿರ್ಣಯ

Last Updated 31 ಆಗಸ್ಟ್ 2021, 6:46 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಅಫ್ಗನಿಸ್ತಾನದಲ್ಲಿರುವ ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರ ರಕ್ಷಣೆ ಸೇರಿದಂತೆ ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ಕುರಿತ ಪ್ರಮುಖ ನಿರ್ಣಯವೊಂದನ್ನು ಅಂಗೀಕರಿಸಲಾಯಿತು.

ಈ ನಿರ್ಣಯವು, ‘ರಾಜಕೀಯ ಚರ್ಚೆ ಸಾಧ್ಯವಿರುವ, ಮಹಿಳೆಯರ ಒಳಗೊಳ್ಳುವಿಕೆಹಾಗೂಸಮಾನತೆಯನ್ನು ಸಾರುವಜೊತೆಗೆಅಫ್ಗಾನಿಸ್ತಾನಜನರಆಶೋತ್ತರಗಳಿಗೆ ಸ್ಪಂದಿಸುವುದಕ್ಕೆ ಎಲ್ಲ ಸದಸ್ಯ ರಾಷ್ಟ್ರಗಳು ಬೆಂಬಲ ಸೂಚಿಸುತ್ತವೆ. ಇದುಕಳೆದ20ವರ್ಷಗಳಅವಧಿಯಲ್ಲಿಅಫ್ಗಾನಿಸ್ತಾನ ಗಳಿಸಿರುವುದನ್ನು ಉಳಿಸಿಕೊಂಡು, ನ್ಯಾಯಬದ್ಧವಾಗಿರಾಷ್ಟ್ರ ನಿರ್ಮಾಣಕ್ಕೂ ಇದು ನೆರವಾಗಲಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೃಂಗ್ಲಾ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಅಫ್ಗನ್‌ ವಿಚಾರವಾಗಿ ಕೈಗೊಂಡ ನಿರ್ಣಯದ ಬಗ್ಗೆ ವಿವರಿಸಿದರು.

ಅಫ್ಗಾನಿಸ್ತಾನದಲ್ಲಿರುವ ಸಿಖ್‌ ಮತ್ತು ಹಿಂದೂಗಳಂತಹ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾರತ ಯಾವಾಗಲೂ ಬೆಂಬಲ ನೀಡುತ್ತಿದ್ದು, ಇತ್ತೀಚೆಗೆ ಅಫ್ಗನ್‌ ಪ್ರಜೆಗಳನ್ನು ಭಾರತಕ್ಕೆ ಸ್ಥಳಾಂತರಿಸಿರುವುದೂ ಅದರ ಒಂದು ಭಾಗ‘ ಎಂದು ಅವರು ಹೇಳಿದರು.

ಈಗ ಮಂಡಳಿ ಕೈಗೊಂಡಿರುವ ನಿರ್ಣಯವು ‘ಕಾಬೂಲ್ ವಿಮಾನ ನಿಲ್ದಾಣ ಹಾಗೂ ಹೊರ ಭಾಗದಲ್ಲಿರುವ ಪ್ರಯಾಣಿಕರಿಗೆ ಸುರಕ್ಷಿತ ವಲಯವನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಸೂಚಿಸುತ್ತದೆ‘ ಎಂದು ಶೃಂಗ್ಲಾ ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT