ವಾಷಿಂಗ್ಟನ್: ‘ಅಮೆರಿಕದ ಮಿತ್ರ ರಾಷ್ಟ್ರವಾಗಿರುವ ಭಾರತಕ್ಕೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ಅಮೆರಿಕದ ನೆರವಿನ ಅಗತ್ಯವಿದೆ. ಹಾಗಾಗಿ ಭಾರತದೊಂದಿಗೆ ಹೆಚ್ಚುವರಿ ಲಸಿಕೆಯನ್ನು ಹಂಚಿಕೊಳ್ಳಬೇಕು’ ಎಂದು ಅಮೆರಿಕದ ಸಂಸದರು ಬೈಡನ್ ನೇತೃತ್ವದ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

‘ಭಾರತಕ್ಕೆ ಕೊರೊನಾ ವಿರುದ್ಧದ ಹೋರಾಟದಲ್ಲಿ ನಮ್ಮ ಅಗತ್ಯವಿದೆ. ನಮ್ಮಲ್ಲಿರುವ ಲಸಿಕೆಯನ್ನು ನಾವು ಅವಶ್ಯಕತೆಯಿರುವ ರಾಷ್ಟ್ರಗಳಿಗೆ ನೀಡುವ ಮೂಲಕ ನೆರವಾಗಬಹುದು. ಅಮೆರಿಕವು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ಲಸಿಕೆಗಳನ್ನು ಈಗಾಗಲೇ ದಾಖಲೆ ಸಮಯದಲ್ಲಿ ವಿತರಿಸಿದೆ’ ಎಂದು ಸಂಸದ ಬ್ರಾಡ್ ವೆನ್‌ಸ್ಟ್ರಪ್ ಅವರು ಟ್ವೀಟ್ ಮಾಡಿದ್ದಾರೆ.

‘ಭಾರತದಲ್ಲಿ ಕೋವಿಡ್ ಬಿಕ್ಕಟ್ಟು ಮುಂದುವರಿದಿದೆ. ಭಾರತಕ್ಕೆ ಕೋವಿಡ್ ವಿರುದ್ಧ ಹೋರಾಡಲು ಹೆಚ್ಚುವರಿ ಲಸಿಕೆಯನ್ನು ನೀಡಬೇಕು’ ಎಂದು ಸಂಸದ ಜಿಮ್ ಕೋಸ್ಟಾ ಅವರು ಹೇಳಿದರು.

ಅಮೆರಿಕದ ಹಲವಾರು ಸಂಸದರು ಭಾರತಕ್ಕೆ ನೆರವಾಗುವಂತೆ ಬೈಡನ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.