ಬುಧವಾರ, ಆಗಸ್ಟ್ 10, 2022
24 °C

ಡೆಮಾಕ್ರಟಿಕ್‌ನ ಪ್ರಾಥಮಿಕ ಚುನಾವಣೆ: ರಾಜಾ ಕೃಷ್ಣಮೂರ್ತಿ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕದಲ್ಲಿ ನೆಲೆಸಿರುವ ಭಾರತದ ಸಂಜಾತ ರಾಜಾ ಕೃಷ್ಣಮೂರ್ತಿ ಅವರು ಡೆಮಾಕ್ರಟಿಕ್‌ನ ಪ್ರಾಥಮಿಕ ಚುನಾವಣೆಯಲ್ಲಿ ಇಲಿನಾಯ್‌‌ನಿಂದ ಗೆಲುವು ದಾಖಲಿಸಿದ್ದಾರೆ.

ಕೃಷ್ಣಮೂರ್ತಿಯವರು ತಮ್ಮ ಪ್ರತಿಸ್ಪರ್ಧಿ ಜುನೈದ್‌ ಅಹ್ಮದ್‌ ಅವರನ್ನು ಶೇ 71ಕ್ಕೂ ಅಧಿಕ ಮತಗಳ ಅಂತರದಿಂದ ಮಣಿಸಿದ್ದಾರೆ.

48 ವರ್ಷದ ಕೃಷ್ಣಮೂರ್ತಿ, ನವದೆಹಲಿಯಲ್ಲಿ ಜನಿಸಿದ್ದರು. ಅವರ ಪಾಲಕರು ತಮಿಳುನಾಡಿನವರು. ನವೆಂಬರ್‌ 8ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ರಿಪಬ್ಲಿಕ್‌ ಪಕ್ಷದ ಕ್ರಿಸ್‌ ಡಾರ್ಗಿಸ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.  

‘ಗೆಲುವು ಖುಷಿ ನೀಡಿದೆ. ನನ್ನ ಕ್ಷೇತ್ರದ ಜನರು ಶಾಂತಿ, ಸೌಹಾರ್ದತೆಯನ್ನು ಬಯಸುತ್ತಾರೆ. ಈ ದಿಸೆಯಲ್ಲಿ ಕೆಲಸ ಮಾಡುತ್ತೇನೆ. ಸಾರ್ವತ್ರಿಕ ಚುನಾವಣೆಯತ್ತಲೂ ಗಮನ ಹರಿಸಲಿದ್ದೇನೆ’ ಎಂದು ಕೃಷ್ಣಮೂರ್ತಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು